ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣ ದಿನದಿಂದ ದಿನಕೆಕ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವಿದೇಶದಲ್ಲಿರುವ ಅವರ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ.
ಆದರೆ, ವಿದೇಶದಲ್ಲಿರುವ ಅವರ ವಿರುದ್ಧ ತನಿಖೆ ನಡೆಸಲು, ಬಂಧನ ಮಾಡಲು ಎಸ್‌ಐಟಿ ಅಧಿಕಾರಿಗಳಿಗೆ ಯಾವುದೇ ರೀತಿಯ ಅವಕಾಶ ಇಲ್ಲ. ಹೀಗಾಗಿ, ಇಂಟರ್‌ಪೋಲ್ ಮೂಲಕವೇ ಪ್ರಜ್ವಲ್ ಬಂಧನ ಮಾಡಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಕೇಂದ್ರದ ಸಹಕಾರ ಕೋರುತ್ತಿದೆ.
ಪ್ರಧಾನಿಗೆ ಪತ್ರ ಬೆರದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಮ್ಮ ಮೈತ್ರಿ ಪಕ್ಷದ ಸಂಸದರು ಆದ, ಪ್ರಸ್ತುತ ಅಭ್ಯರ್ಥಿಯಾದ ಪೊರಜ್ವಲ್ ರೇವಣ್ಣ ಅವರ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಗಳಿವೆ. ಹೀಗಾಗಿ, ಅವರನ್ನು ರಾಜ್ಯಕ್ಕೆ ಕರೆತರಲು ಕೇಂದ್ರದ ಸಹಕಾರ ಬೇಕಿದೆ. ಪ್ರಜ್ವಲ್ ವಿದೇಶದಲ್ಲಿದ್ದು, ಪಾಸ್‌ಪೋರ್ಟ್ ರದ್ದು ಮಾಡಬೇಕು ಎಂದು ಕೋರಿದ್ದಾರೆ.
ಈಗಾಗಲೇ, ಎರಡು ಬಾರಿ ಸಿಎಂ ಪತ್ರ ಬರೆದಿದ್ದು, ಮೊದಲ ಪತ್ರಕ್ಕೆ ಪ್ರಧಾನಿ ಕಚೇರಿಯಿಂದಾಗಲೀ, ವಿದೇಶಾಂಗ ವ್ಯವಹಾರಗಳ ಕಚೇರಿಯಿಂದಾಗಲೀ, ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಪತ್ರ ಬರೆದಿದ್ದು, ಎರಡನೇ ಪತ್ರಕ್ಕಾದರೂ ಪ್ರತಿಕ್ರಿಯೆ ಸಿಗುತ್ತದೆಯಾ ಕಾದು ನೋಡಬೇಕಿದೆ.