ಅಪರಾಧ ಸುದ್ದಿ

ಬೆಂಗಳೂರಿನ ಹೋಟೆಲ್‌ ಗಳಿಗೆ ಬಾಂಬ್ ಬೆದರಿಕೆ

Share It

ಬೆಂಗಳೂರು: ನಗರದ ಐಷರಾಮಿ ಹೋಟೆಲ್‌ಗಳಿಗೆ ಬಾಂಬ್ ಹಾಕುವುದಾಗಿ ಬೆದರಿಕೆಯ ಇ-ಮೇಲ್ ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.

ನಗರದ ಎಲೆಕ್ಟಾçನಿಕ್ ಸಿಟಿಯ ಬಳಿಯ ಕೆಲವು ಫೈವ್‌ಸ್ಟಾರ್ ಹೋಟೆಲ್ ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿದೆ. ಇದು ಸಹಜವಾಗಿಯೇ ಹೊಟೇಲ್ ಸಿಬ್ಬಂದಿ ಹಾಗೂ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಪ್ರವಾಸಿಗರನ್ನು ಆತಂಕ್ಕೀಡು ಮಾಡಿದೆ.

ಎಲೆಕ್ಟಾçನಿಕ್ ಸಿಟಿಯ ಸ್ಟಾರ್ ಹೋಟೆಲ್ ಗಳೀಗೆ ಬಂದಿರುವ ಇ-ಮೇಲ್ ಸಂದೇಶದಲ್ಲಿ
ಮಧ್ಯರಾತ್ರಿ 2 ಗಂಟೆ ವೇಳೆಗೆ ಹೋಟೆಲ್ ಗೆ ಬಾಂಬ್ ಇಟ್ಟು ಉಡಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಂದೇಶದಿAದ ಗಾಬರಿಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು, ಬಾಂಬ್ ಸ್ಕಾ÷್ವಡ್ ಮತ್ತು ಶ್ವಾನ ತಂಡಗಳೊAದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಕಂಡುಬAದಿಲ್ಲ. ಹೀಗಾಗಿ, ಇ-ಮೇಲ್ ಬಂದಿರುವ ಆಧಾರದಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ. ಇದರ ಹಿಂದಿರುವ ಕೈವಾಡ ಯಾರದ್ದು ಎಂಬ ಅಂಶವನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.


Share It

You cannot copy content of this page