ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಉದ್ಯಮಿ, ಶಶಿಕಾಂತ್ ರಾವ್ ಅವರ ವತಿಯಿಂದ ಪ್ರದಾನ ಮಾಡಲಾಗುವ ಪುನೀತ್ ರಾಜ್‌ಕುಮಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೇ 25 ರ ಶನಿವಾರ ನಡೆಯಲಿದೆ.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಕಲಾವಿದರಾದ ಅಶ್ವತ್ಥ ನಾರಾಯಣ ಕುಂಟನಕುAಟೆ, ನೃತ್ಯ ಪಟು ಪೂಜಾ ರಂಗನಾಥ್ ಅವರಿಗೆ ಪುನೀತ್ ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ನೀಡಲಾಗುತ್ತದೆ. ಯುವ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಯುವ ಸಾಹಿತಿ ಸದಾಶಿವ ಅವರಿಗೆ ಹಾಗೂ ವಿಶೇಷ ಚೇತನ ಕಲಾವಿದೆ ಮಧು ಕಾರಗಿ ಅವರಿಗೆ ನೀಡಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ, ಸಾಹಿತಿ ಶಶಿಕಾಂತ್ ರಾವ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಡಾ. ಗೀತಾ ರಾಮಾನುಜಂ, ಲಕ್ಷಿö್ಮÃ ಪತಯ್ಯ, ವಾಸುದೇವ ಹೊನಹಳ್ಳಿ ಹಾಗೂ ಡಾ.ಎಸ್. ರಾಮಲಿಂಗೇಶ್ವರ(ಸಿಸಿರಾ) ಅಮುಖ್ಯತಿಥಿಗಳಾಗಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ಜಯಶ್ರೀ ರಾಜು, ಡಾ.ಅಂಬುಜಾಕ್ಷಿ ಪ್ರಕಾಶ್, ಎಂ.ಎಸ್.ಆಶಲತಾ ಭಾಗವಹಿಸಲಿದ್ದು, ಅನೇಕ ಯುವ ಸಾಹಿತಿಗಳು ತಮ್ಮ ಕವನ ವಾಚನ ಮಾಡಲಿದ್ದಾರೆ.