ಬೆಂಗಳೂರು: ರಾಜಕೀಯವಾಗಿ ಏನೇ ಇರಲಿ, ಒಬ್ಬ ಪ್ರಧಾನಿಯಾಗಿ, ಪ್ರಧಾನಿ ನರೇಂದ್ರ ಮೋದಿ ಸರಕಾರದ ಅಂಗ ಸಂಸ್ಥೆಗಳ ಬಗ್ಗೆಯೇ ಸುಳ್ಳು ಹೇಳಬಾರದು.
ಬಡವರಿಗೆ ಉಚಿತ ಸೌಲಭ್ಯಗಳನ್ನು ಕೊಡುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬುದು ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಹಳೆಯ ಹಳಸಲು ವಾದ. ಅದರಲ್ಲಿ ಇತ್ತೀಚೆಗೆ ಅವರು, ಬೆಂಗಳೂರು ಮೆಟ್ರೋ ಕುರಿತು ಮಾಡಿರುವ ಆರೋಪ ಪ್ರಧಾನ ಮಂತ್ರಿ ಅವರ ಕ್ಷುಲ್ಲಕ ರಾಜಕಾರಣಕ್ಕೊಂದು ಉತ್ತಮ ಉದಾಹರಣೆ.
ರಾಜ್ಯ ಸರಕಾರದ ಮೊದಲ ಗ್ಯಾರಂಟಿ, ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋಗೆ ಭಾರಿ ನಷ್ಟವಾಗುತ್ತಿದೆ ಎಂಬುದು ಪ್ರಧಾನಿಯವರ ವಾದ. ಆದರೆ, ಮೆಟ್ರೋ ನಿಗಮದ ಅಂಕಿ-ಅಂಶಗಳ ಪ್ರಕಾರ ಮೆಟ್ರೋ ಆದಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಶಕ್ತಿ ಯೋಜನೆ ಜಾರಿಯಾದ ನಂತರ ಶೇ, 30 ರಷ್ಟು ಹೆಚ್ಚುವರಿ ಪ್ರಯಾಣಿಕರು ಮೆಟ್ರೋ ಮಾರ್ಗಗಳಲ್ಲಿ ಸಂಚಾರ ಮಾಡಿದ್ದಾರೆ. ಹೀಗಿರುವಾಗ ಮೋದಿ ಹೇಳಿದಂತೆ ಮೆಟ್ರೋ ಅದೇಗೆ ಲಾಸ್ ನಲ್ಲಿ ನಡೆಯುತ್ತಿದೆ?
ಜನವರಿ 2023 ರಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ1.65 ಕೋಟಿ ರು. ಆಗಿತ್ತು, ಅದೇ ರೀತಿ ಮೆಟ್ರೋದ ಆದಾಯ 39.15 ಕೋಟಿ ಇತ್ತು. ಅದೇ ರೀತಿ 2024 ರಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಎರಡು ಕೋಟಿ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ 35 ಲಕ್ಷ ಏರಿಕೆ ಮತ್ತು ಆದಾಯದ ಪ್ರಮಾಣದಲ್ಲಿ 1.10 ಕೋಟಿ ಗಣನೀಯ ಏರಿಕೆ ಕಂಡು ಬಂದಿದ್ದು, ನರೇಂದ್ರ ಮೋದಿ ಮಾಡಿದ ಆರೋಪ ಆಧಾರ ರಹಿತ ಎಂಬುದು ಇದರಿಂದ ಸಾಭೀತಾದಂತಾಗಿದೆ.
ಶಕ್ತಿ ಯೋಜನೆಯ ಸಕ್ಸಸ್ !
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಮಾಹಿತಿ ಪ್ರಕಾರ, ಸರಕಾರ ಶಕ್ತಿ ಯೋಜನೆ ಜಾರಿ ಮಾಡಿದ ನಂತರ, 67.34 ಕೋಟಿ ಮಹಿಳೆಯರು ಬೆಂಗಳೂರು ವ್ಯಾಪ್ತಿಯಲ್ಲಿ ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದ ಮೆಟ್ರೋ ಆದಾಯವೂ ಕಡಿಮೆಯಾಗಿಲ್ಲ. ಸಾರಿಗೆ ಸಂಸ್ಥೆಗೂ ನಷ್ಟವಾಗಿಲ್ಲ. ಮಹಿಳಾ ಸಬಲೀಕರಣಕ್ಕೆ ಹೆಚ್ವಿನ ಆದ್ಯತೆ ಸಿಗುತ್ತಿದ್ದು, ಇದರಿಂದ ಮಹಿಳೆಯರ ಆದಾಯದ ಜತೆಗೆ ಸಂಸ್ಥೆ ಆದಾಯವೂ ಹೆಚ್ಚಾಗಿದೆ. ಹೊಸ ಬಸ್ಸುಗಳ ಸೇರ್ಪಡೆ, ಸಿಬ್ಬಂದಿ ನೇಮಕಕ್ಕೆ ಕೆಎಸ್ ಆರ್ ಟಿಸಿ ಮುಂದಾಗಿದೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಇಂತಹ ಆಧಾತರಹಿತ ಟೀಕೆ ಸಲ್ಲದು ಎಂದಿದ್ದಾರೆ.