ಮಾವಿನ ಎಲೆಗಳ ಪ್ರಯೋಜನ ನಿಮಗೆ ಗೊತ್ತಾ?
ಮಾರ್ಚ್ ಬಂತು ಎಂದರೆ ಎಲ್ಲರು ಮಾವಿನ ಹಣ್ಣಿನ ಆಗಮನಕ್ಕಾಗಿ ಕಾತೂರದಿಂದ ಕಾಯುತ್ತಿರುತ್ತಾರೆ. ಮಾವುಗಳ ರಾಜ ಮಾವಿನ ಹಣ್ಣನ್ನು ಸವಿಯುವುದು ಎಂದರೆ ಒಂದು ಮಜ.
ಮಾವಿನ ಹಣ್ಣು ಎಷ್ಟು ಆರೋಗ್ಯಕ್ಕೆ ಒಳ್ಳೆಯದು ಅಷ್ಟೇ ಮಾವಿನ ಎಲೆಗಳು ಸಹ ಬಹಳ ಉಪಯೋಗಕಾರಿ ಎಂದು ನಿಮಗೆ ಗೊತ್ತಾ?.
ಗೊತ್ತಿಲ್ಲ ಎಂದರೆ ನಾವು ತಿಳಿಸುತ್ತೇವೆ ನೋಡಿ, ಮಾವಿನ ಎಲೆಗಳಲ್ಲಿ ವಿಟಮಿನ್ ಸಿ, ಬಿ ಮತ್ತು ಎ ಗಳಿವೆ. ಜತೆಗೆ ಮಾವಿನ ಎಲೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ.
ಮಾವಿನ ಎಲೆಗಳು ನಮ್ಮ ದೇಹದಲ್ಲಿನ ಕೊಬ್ಬಿನ ಮಟ್ಟವನ್ನು ಕಡಿಮೆಮಾಡುವ ಮೂಲಕ ಬೊಜ್ಜನ್ನು ಕಡಿಮೆ ಮಾಡುತ್ತದೆ. ಈ ಎಲೆಗಳು ಹೈಪೊಟೆನ್ಸಿವ್ ಗುಣಲಕ್ಷಣವನ್ನು ಹೊಂದಿದ್ದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮಾವಿನ ಎಲೆಯ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಾವಿನ ಎಲೆಯನ್ನು ಅಗಿದು ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆಯನ್ನು ನಿವಾರಿಸಬಹುದು. ಜತೆಗೆ ಮಧುಮೇಹವನ್ನು ನಿರ್ವಹಿಸುವಲ್ಲಿ ಮಾವಿನ ಎಲೆಗಳು ಸಹಾಯಕಾರಿಯಾಗಿವೆ. ಅಷ್ಟೇ ಅಲ್ಲದೆ ಮಾವಿನ ಎಲೆಗಳನ್ನು ರುಬ್ಬಿ ಚರ್ಮದ ಸಮಸ್ಯೆ ಇರುವವರು ಹಚ್ಚಿಕೊಂಡರೆ ಸಮಸ್ಯೆ ನಿವಾರಣೆಯಾಗುತ್ತೆ ಮತ್ತು ಗಾಯವಾದ ಜಾಗಕ್ಕೆ ರುಬ್ಬಿದ ಪೇಸ್ಟ್ ಅನ್ನು ಹಚ್ಚುವುದರಿಂದ ಗಾಯ ಸುಲಭವಾಗಿ ವಾಸಿಯಾಗುತ್ತದೆ.