ಬೆಂಗಳೂರು: ಶಾಸಕ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಗರದ 17 ನೇ ಎಸಿಎಂಎಂ ನ್ಯಾಯಾಲಯ ಮೇ 14ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.
ಇಂದು ಸಂಜೆ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಯಿತು. ರೇವಣ್ಣರನ್ನು ಜೈಲಿಗೆ ಶಿಫ್ಟ್ ಮಾಡುವಾಗ ಮುಂಜಾಗ್ರತೆ ಮತ್ತು ಭದ್ರತೆಯ ದೃಷ್ಟಿಯಿಂದ ಜೈಲಿನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಐವರು ಪೊಲೀಸ್ ಇನ್ಸ್ ಪೆಕ್ಟರ್ ಗಳಿಂದ ಭದ್ರತೆ ಒದಗಿಸಲಾಗಿದೆ ಎಂದು ಗೊತ್ತಾಗಿದೆ. ಏತನ್ಮಧ್ಯೆ, ಮೇ 7 ರಂದು ಸ್ವದೇಶಕ್ಕೆ ಮರಳುವರೆಂದು ಎನ್ನಲಾಗಿದ್ದ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಇದುವರೆಗೆ ಪತ್ತೆಯಿಲ್ಲ ಮತ್ತು ಎಲ್ಲಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಈಗಾಗಲೇ ಪ್ರಜ್ವಲ್ ರೇವಣ್ಣ ಪತ್ತೆಗೆ ಎಸ್ಐಟಿ ಇಂಟರ್ ಪೋಲ್ ಮೂಲಕ 196 ದೇಶಗಳಿಗೆ ಮಾಹಿತಿ ಕೋರಿದೆ.