ಕೋಟಾ(ರಾಜಸ್ಥಾನ): ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ತನ್ನ ಹರಿಶಿನ ಶಾಸ್ತ್ರದ ದಿನವೇ ದುರಂತ ಸಾವಿಗೀಡಾಗಿದ್ದಾನೆ.
ರಾಜಸ್ಥಾನದ ಮದುವೆ ಮನೆಯೊಂದರಲ್ಲಿ ಈ ಘೋರ ದುರಂತ ಸಂಭವಿಸಿದ್ದು, ಮದುವೆ ಸಂಭ್ರಮದಲ್ಲಿದ್ದ ವರನೇ ವಿದ್ಯುತ್ ಸ್ಪಶರ್ಿಸಿ ಮೃತಪಟ್ಟಿದ್ದಾರೆ. ಇದರಿಂದಾಗಿ ವಧು, ವರನ ಮನೆಯಲ್ಲಿ ಸೂತಕದ ವಾತಾವರಣ ಏರ್ಪಟ್ಟಿದೆ.
”ಕೋಟಾ ಜಿಲ್ಲೆಯ ವರನ ಮನೆಯಲ್ಲಿ ಏಪ್ರಿಲ್ 22ರಂದು ಘಟನೆ ನಡೆದಿದೆ. ಮೃತನನ್ನು ಕೇಶ್ವಾಪುರ ಪ್ರದೇಶದ ನಿವಾಸಿ ಸೂರಜ್ ಸಕ್ಸೇನಾ (30) ಎಂದು ಗುರುತಿಸಲಾಗಿದೆ. ಇಲ್ಲಿನ ಮೆನಾಲ್ ರೆಸಿಡೆನ್ಸಿ ರೆಸಾಟರ್್ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದ ವೇಳೆ ವಿದ್ಯುತ್ ಸ್ಪಶರ್ಿಸಿ ವರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
”ವಿದ್ಯುತ್ ತಗುಲಿದ ತಕ್ಷಣವೇ ಸೂರಜ್ ಸಕ್ಸೇನಾ ಅವರನ್ನು ಅತಿಥಿಗಳು ಮತ್ತು ಸಂಬಂಧಿಕರು ರಕ್ಷಿಸಲು ಪ್ರಯತ್ನಿಸಿದರು. ಅದು ಸಾಧ್ಯವಾಗದೇ ಅವರು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮದುವೆ ಕಾರ್ಯಕ್ರಮದ ಸ್ಥಳದ ಬಳಿ ಏರ್ ಕೂಲರ್ಗಳಿಗೆ ಅಳವಡಿಸಲಾಗಿದ್ದ ತಂತಿಗಳು ವಿದ್ಯುತ್ ದುರಂತಕ್ಕೆ ಕಾರಣವಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಯಾಪುರದ ಎಂಬಿಎಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.