ಸೂಪರ್ ಕಾಪ್ ಹೆಸರಲ್ಲಿ ಸುಳ್ಳು ಪೋಸ್ಟ್: 40 ಸಾವಿರಕ್ಕೆ 4.5 ಲಕ್ಷ ಗಳಿ ಅಂದ್ರಾ ಶಂಕರ್ ಬಿದಿರಿ?
ಬೆಂಗಳೂರು: ಒಂದು ಕಾಲದ ಪೊಲೀಸ್ ಸೂಪರ್ ಕಾಪ್ ಶಂಕರ್ ಬಿದಿರಿ ಹೆಸರಲ್ಲಿಯೇ ವಂಚನೆ ನಡೆಸುವಷ್ಟರ ಮಟ್ಟಿಗೆ ವಂಚಕರು ಅಪ್ ಗ್ರೇಡ್ ಆಗಿದ್ದಾರೆ ಎಂಬುದು ವ್ಯವಸ್ಥೆಯ ವಿಪರ್ಯಾಸ.
ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದಿರಿ ಅವರ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣ ಖಾತೆಯಲ್ಲಿ 40 ಸಾವಿರ ರು. ಹೂಡಿಕೆ ಮಾಡಿದ್ದಕ್ಕೆ ಮೂರೇ ಗಂಟೆಯಲ್ಲಿ 4.5 ಲಕ್ಷ ಲಾಭ ಬಂದಿದೆ ಎಂದು ಪೋಸ್ಟ್ ಮಾಡಲಾಗಿದೆ. ಇದೊಂದು ವಂಚಕರ ಕಿತಾಪತಿಯಾಗಿದ್ದು, ಬಿದಿರಿ ಅವರನ್ನು ಅನುಸರಿಸುವ ಜನರು ವಂಚನೆ ಜಾಲಕ್ಕೆ ಬಲಿಯಾಗುವಂತೆ ಮಾಡಲು ಇದೊಂದು ಸುಲಭ ದಾರಿಯೆಂದು ವಂಚಕರು ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ವಿಕ್ಟೋರಿಯಾ 36 ಟ್ರೇಡರ್ ಎಂಬುವವರು ಹೂಡಿಕೆ ಸಂಬಂಧ ಮಾಹಿತಿ ನೀಡಿರುವ ಒಂದು ಖಾತೆದಾರರು ಬಿಟ್ ಕಾಯಿನ್ ಪರಿಣಿತರು ಎಂಬುದು ಗೊತ್ತಾಗಿ, ಅವರ ಸಲಹೆಯಂತೆ ನಾನು 40 ಸಾವಿರ ರು. ಹೂಡಿಕೆ ಮಾಡಿದೆ. ಕೇವಲ ಮೂರೇ ಗಂಟೆಯಲ್ಲಿ ನಾನು 4.5 ಲಕ್ಷ ರು. ಲಾಭದ ಹಣ ವಾಪಸ್ ಬಂದಿದೆ ಎಂದು ಶಂಕರ್ ಬಿದಿರಿ ಅವರ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.
ಪೋಸ್ಟ್ ಕಳೆಗೆ ಅವರನ್ನು ಸಂಪರ್ಕಿಸುವ ಲಿಂಕ್ ಸಹ ಹಾಕಿದ್ದು, ಪೇಮೆಂಟ್ ರಿಸೀವ್ ಮಾಡಿಕೊಂಡ ಸ್ಕ್ರೀನ್ ಶಾಟ್ ಲಗತ್ತಿಸಲಾಗಿದೆ. ಶಂಕರ್ ಬಿದರಿ ಅವರು, ಯಾರೋ ನನ್ನ ಅಕೌಂಟ್ ಹ್ಯಾಕ್ ಮಾಡಿ, ಹೀಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ಯಾರೂ ನಂಬಬಾರದು. ಈ ಸಂಬಂಧ ನಾನು ದೂರು ದಾಖಲು ಮಾಡುತ್ತೇನೆ ಎಂದು ವಿವರಿಸಿದ್ದಾರೆ.