ಜೈಲಿನಲ್ಲಿ ಕಣ್ಣೀರಿಟ್ಟರಂತೆ ಮಾಜಿ ಸಚಿವ ರೇವಣ್ಣ
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಬೇಲ್ ಸಿಕ್ಕಿದೆ. ಆದರೆ, ಜಾಮೀನು ಸಿಗುವ ಮೊದಲು ರೇವಣ್ಣ ಅವರನ್ನು ಭೇಟಿಯಾಗಲು ಹೋಗಿದ್ದವರ ಮುಂದೆ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಎಚ್.ಡಿ.ರೇವಣ್ಣ, ಕರ್ನಾಟಕದಿಂದ ಏಕೈಕ ಪ್ರಧಾನಿಯಾಗಿರುವ ಎಚ್,ಡಿ.ದೇವೇಗೌಡರ ಮಗ. ತಮ್ಮ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಸ್ವತಃ ಮೂರು ಬಾರಿ ಮಂತ್ರಿಯಾಗಿದ್ದ ರೇವಣ್ಣ, ಅನೇಕ ಖಾತೆಗಳನ್ನು ನಿಭಾಯಿಸಿದ್ದವರು. ಇನ್ನು ಕೆಲಸದ ವಿಚಾರದಲ್ಲಿ ವಿರೋಧ ಪಕ್ಷದವರು ಕೂಡ ಹೊಗಳುವಷ್ಟರ ಮಟ್ಟಿಗೆ ಹಠ ಹಿಡಿದು ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವ ಜಾಯಮಾನದವರು ರೇವಣ್ಣ,. ಅಂತಹ ವ್ಯಕ್ತಿ ಮೂರು ದಿನದಿಂದ ಯಾರ ಭೇಟಿಗೂ ಅವಕಾಶವಿಲ್ಲದಂತೆ ಜೈಲಿನಲ್ಲಿರುವುದು ಸಂಕಟವನ್ನು ತರಿಸಿದೆ.
ಸರಕಾರಿ ರಜೆಯಿದ್ದ ಕಾರಣದಿಂದ ಜೈಲಿನ ಅಧಿಕಾರಿಗಳು ಶುಕ್ರವಾರದಿಂದ ಯಾರನ್ನು ಭೇಟಿಯಾಗಲು ರೇವಣ್ಣ ಅವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ, ಇಂದು ಬೆಳಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಅವರು ರೇವಣ್ಣ ಅವರ ಭೇಟಿಗೆ ಹೋಗುತ್ತಿದ್ದಂತೆ ಭಾವುಕರಾದ ರೇವಣ್ಣ ಹತ್ತು ನಿಮಿಷ ಸತತವಾಗಿ ಕಣ್ಣಿರು ಹಾಕಿದರಂತೆ. ಇದನ್ನು ಸ್ವತಃ ಜಿಡಿಡಿ ಮಾಧ್ಯಮಗಳ ಮುಂದೆ ಹೇಳಿಕೊಂಡರು. ತಮ್ಮ ಪುತ್ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕುವುದಲ್ಲದೆ, ತಮ್ಮನ್ನು ಜೈಲಿನಲ್ಲಿರುವಂತೆ ಮಾಡಿದ್ದಕ್ಕೆ ರೇವಣ್ಣ ಕಣ್ಣಿರಿಟ್ಟರು ಎಂಬುದು ಗೊತ್ತಾಗಿದೆ.
ರಾಜಕೀಯವಾಗಿ ಇದು ಷಡ್ಯಂತ್ರ ಎಂದು ಹೇಳುತ್ತಿದ್ದಾರಾದರೂ, ಸತ್ಯ ಏನೆಂಬುದು ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ. ಪ್ರಜ್ವಲ್ ಮಾಡಿರುವ ವಿಡಿಯೋಗಳಲ್ಲಿರುವವರು ನಿಜವಾಗಲೂ ಸಂತ್ರಸ್ತೆಯರಾ? ಪ್ರಜ್ವಲ್ ರೇವಣ್ಣನೇ ಈ ಎಲ್ಲ ವಿಡಿಯೋಗಳನ್ನು ಮಾಡಿಕೊಂಡಿದ್ದಾ? ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಎಸಗಿದ್ದಾರಾ ಎಂಬೆಲ್ಲ ಅಂಶಗಳು ತನಿಖೆಯಿಂದಷ್ಟೇ ಹೊರಬರಬೇಕಿದೆ. ಹೀಗಿದ್ದು, ದಿನ ನೂರಾರು ಜನರೊಂದಿಗೆ ಬರೆಯುತ್ತಾ ಇದ್ದ ರೇವಣ್ಣ ಜೈಲಿನಲ್ಲಿ ಒಂಟಿಯಾಗಿ ಕಳೆಯಬೇಕಾದ ಸ್ಥಿತಿ ಬಂದಾಗ ಅದನ್ನು ನೆನೆದು ಕಣ್ಣೀರಾದರು ಎನ್ನಲಾಗಿದೆ.