ರಾಜಕೀಯ ಸುದ್ದಿ

ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ: ಪಿಳ್ಳಮುನಿಶಾಮಪ್ಪ

Share It

ದೇವನಹಳ್ಳಿ: ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೂಡ ಬಿಜೆಪಿ ಗೆಲುವಿನ ನಗೆ ಬೀರಲಿದೆ ರಾಷ್ಟ್ರ ನಿರ್ಮಾಣ ಹಾಗೂ ದೇಶದ ಪ್ರಗತಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಬಹಳ ಅಗತ್ಯ ವಾಗಿದೆ, ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಹೊರವಲಯದ ಕಾರಹಳ್ಳಿ ಸಮೀಪದ ಗೋಪೀನಾಥ ಬೆಟ್ಟದ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದಲ್ಲಿ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಗೋಪಿನಾಥ ಬೆಟ್ಟ ಅಥವ ಗೋವರ್ಧನಗಿರಿ ಎಂದೇ ಕರೆಯಲ್ಪಡುವ ಈ ಬೆಟ್ಟದಲ್ಲಿ ನೆಲೆಸಿರುವ ಪುರಾತನ ಪ್ರಸಿದ್ಧ ಲಕ್ಷ್ಮಿನರಸಿಂಹ ಸ್ವಾಮಿ ದೇವರ ಬಗ್ಗೆ ನಮ್ಮ ಕುಟುಂಬ ಹಿಂದಿನಿಂದಲೂ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದು ನಮ್ಮ ತಂದೆ ತಾಯಿಯವರು ನನ್ನನ್ನು ಬಹಳಷ್ಟು ಕಷ್ಟ ಪಟ್ಟು ಸಾಕಿ ವಿದ್ಯಾಭ್ಯಾಸ ನೀಡಿ ಬೆಳೆಸಿ ಇಂದು ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಇದರಲ್ಲಿ ನಮ್ಮ ತಂದೆ ತಾಯಿ ಆಶೀರ್ವಾದದ ಜೊತೆಯಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆಯು ಬಹಳವಾಗಿದೆ.

ಇದೇ ಮೇ ತಿಂಗಳ 22 ರಂದು ಲಕ್ಷ್ಮೀನರಸಿಂಹ ದೇವರ ಜಯಂತಿ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಮುಗಿದಿರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವಿಗಾಗಿ ಮತ್ತು ಊರಿಗೆ ನಾಡಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರ ಕಷ್ಟ ನಷ್ಟಗಳನ್ನು ಬಗೆಹರಿಸಿ ಮಳೆ ಬೆಳೆ ಕರುಣಿಸಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲು ಕುಟುಂಬ ಸಮೇತರಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಪ್ರಾರ್ಥಿನೆ ಸಲ್ಲಿಸಿದ್ದೇವೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಮತದಾರರಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯ ಬಗ್ಗೆ ಜನತೆಗೆ ಮನವರಿಕೆ ಮಾಡಿ ಜಾಗೃತಿ ಮೂಡಿಸುವ ಮೂಲಕ ನಮ್ಮ ಅಭ್ಯರ್ಥಿ ಸುಧಾಕರ್ ಅವರ ಪರವಾಗಿ ಕೆಲಸ ಮಾಡಿದ್ದೇವೆ ಅವರ ಗೆಲುವಿಗಾಗಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಲ್ಲಿ ಬೇಡಿಕೊಂಡಿದ್ದೇವೆ, ಎಂದು ಮಾಜಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಉಮಾ ಪಿಳ್ಳಮುನಿಶಾಮಪ್ಪ, ಹೆಗ್ಗನಹಳ್ಳಿ ಮಂಜುನಾಥ್, ತಾಪಂ ಮಾಜಿ ಸದಸ್ಯ ಗೋಪಾಲಸ್ವಾಮಿ, ಜೆಡಿಎಸ್ ತಾಲೂಕು ಉಪಾಧ್ಯಕ್ಷ ಹನುಮಂತಪ್ಪ, ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಅಣ್ಣೇಶ್ವರ ವೆಂಕಟೇಶ್, ಮಾಜಿ ಅಧ್ಯಕ್ಷ ಹ್ಯಾಡಾಳ ದೇವರಾಜ್, ಕದಿರಪ್ಪ, ಹಿರಿಯ ಮುಖಂಡರಾದ ಅಣ್ಣೇಶ್ವರ ವೇಣುಗೋಪಾಲ್, ವೆಂಕಟಗಿರಿಕೋಟೆ ಮುನಿರಾಜು, ಯುವ ಮುಖಂಡರಾದ ಬೈಚಾಪುರ ಕುಮಾರ್, ನರಸಿಂಹಮೂರ್ತಿ, ದೇವನಹಳ್ಳಿ ನಟರಾಜ್, ಸೋಲೂರು ನಾಗರಾಜ್, ಸಿಂಗ್ರಳ್ಳಿ ನರಸಿಂಹಯ್ಯ, ಭೂವನಹಳ್ಳಿ ಆನಂದ್, ಸಾದಹಳ್ಳಿ ಮಂಜುನಾಥ್, ಸಾವಕನಹಳ್ಳಿ ಶ್ರೀನಿವಾಸ್ ಇದ್ದರು.


Share It

You cannot copy content of this page