ಹಾಸನ: ಮೋದಿ ಮತ್ತು ಎಚ್‌ಡಿಕೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕರು, ಮಾಜಿ ಎಮ್ಮೆಲ್ಸಿ ಗೋಪಾಲಸ್ವಾಮಿ ಕಡೆ ೫ ಕೋಟಿ ಅಡ್ವಾನ್ಸ್ ಕಳಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ನ್ಯಾಯಾಲಯಕ್ಕೆ ಹಾಝರಾಗಿ ಜೈಲಿಗೆ ತೆರಳುವ ವೇಳೆ ವ್ಯಾನ್‌ನಲ್ಲಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಕೆಲವು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ. ಅದರಲ್ಲಿ ಪ್ರಮುಖವಾಗಿ ತಮಗೆ, ೧೦೦ ಕೋಟಿ ಆಫರ್ ಕೊಟ್ಟಿದ್ದು, ಆ ವ್ಯವಹಾರಕ್ಕೆ ಶಿವರಾಮೇಗೌಡರ ಮೂಲಕ ಸಂಧಾನ ನಡೆಸಿ, ಮಾಜಿ ಎಮ್ಮೆಲ್ಸಿ ಗೋಪಾಲಸ್ವಾಮಿ ಕಡೆ ೫ ಕೋಟಿ ಅಡ್ವಾನ್ಸ್ ಕೊಟ್ಟು ಕಳುಹಿಸಿದ್ದರು ಎಂದು ಅನೇಕ ನಾಯಕರ ಹೆಸರು ಉಲ್ಲೇಖಿಸಿದ್ದಾರೆ.
೧೦೦ ಕೋಟಿ ಆಫರ್ ನೀಡಿದ್ದರು, ಪೆನ್ ಡ್ರೆöÊವ್ ರೆಡಿಮಾಡಿ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇಡೀ ಪ್ರಕರಣದಲ್ಲಿ ಮೋದಿ, ಬಿಜೆಪಿ ಮತ್ತು ಎಚ್‌ಡಿಕೆಗೆ ಕೆಟ್ಟ ಹೆಸರು ಬರುವಂತೆ ಮಾಡಲು ಯೋಜನೆ ರೂಪಿಸಿದ್ದರು. ಆಯೋಜನೆ ಜಾರಿಗೊಳಿಸಲು ನಾಲ್ವರು ಸಚಿವರ ತಂಡವನ್ನು ನಿಯೋಜನೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಟ್ರೆöÊವರ್ ಕಾರ್ತಿಕ್‌ನನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡು, ನನಗೆ ಕುಮಾರಸ್ವಾಮಿಯೇ ಪೆನ್ ಡ್ರೆöÊವ್ ಹಂಚಿದ್ದು ಎಂದು ಹೇಳುವಂತೆ ಸೂಚನೆ ನೀಡಿದ್ದರು. ಹೀಗೆ ಹೇಳಿದರೆ ದೊಡ್ಡ ಮೊತ್ತದ ಸೆಟ್ಲಿಮೆಂಟ್ ಮಾಡುವುದಾಗಿ ತಿಳಿಸಿ, ಶಿವರಾಮೇಗೌಡ ಅವರ ಮೂಲಕ ಸಂಧಾನ ಮಾಡಿಸಿ, ಮಾಜಿ ಎಮ್ಮೆಲ್ಸಿ ಗೋಪಾಲಸ್ವಾಮಿ ಮೂಲಕ ೫ ಕೋಟಿ ಅಡ್ವಾನ್ಸ್ ಕಳುಹಿಸಿದ್ದರು ಎಂದು ವಿವರಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ ಮತ್ತು ರೇವಣ್ಣ ಬಂಧನ, ಜಾಮೀನು ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಪೆನ್‌ಡ್ರೆöÊವ್ ಪ್ರಕರಣ ಇದೀಗ ಬೇರೆ ದಿಕ್ಕಿಗೆ ತಿರುಗಿದ್ದು, ದೇವರಾಜೇಗೌಡ ಅವರ ಪ್ರಕಾರ ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆಲ್ಲ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿಬಂದಿದೆ. ಇದೀಗ ಯಾವ ದಿಕ್ಕಿಗೆ ಹೋಗಿ ನಿಲ್ಲಲಿದೆ ಕಾದು ನೋಡಬೇಕಿದೆ.