ಬೆಂಗಳೂರು: ಯುಗಾದಿ ಹಾಗೂ ಮದುವೆ ಸೀಸನ್ ಆರಂಭವಾಗುವ ಮೊದಲೇ ಚಿನ್ನದ ಬೆಲೆ ಗಗನಕ್ಕೇರುವ ಮುನ್ಸೂಚನೆ ನೀಡಿದ್ದು, ಈಗಾಗಲೇ 10 ಗ್ರಾಂ ಚಿನ್ನದ ಬೆಲೆ 71 ಸಾವಿರ ರುಪಾಯಿ ದಾಟಿದೆ.:
ಇದೇ ಮೊದಲ ಬಾರಿಗೆ ಈ ದಾಖಲೆಯ ಬೆಲೆಯನ್ನು ಮುಟ್ಟಿರುವ ಚಿನ್ನದ ಬೆಲೆಯನ್ನು ಕಂಡು ಗ್ರಾಹಕರು ಹೌಹಾರಿದ್ದಾರೆ. ಕಳೆದ ಹತ್ತು ದಿನಗಳಲ್ಲಿ 3500 ಇದ್ದ ಚಿನ್ನದ ಬೆಲೆ 4000 ರು.ಗಳಿಗೆ ಏರಿಕೆ ಕಂಡಿದೆ. ಎರಡು ಬಾರಿ ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಇಳಕೆ ಕಂಡಿದ್ದು ಬಿಟ್ಟರೆ ಏರುಗತಿಯಲ್ಲಿಯೇ ಸಾಗುತ್ತಿದೆ.
ಯುಗಾದಿ ಹಬ್ಬ ಮತ್ತು ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ಯೋಜನೆ ರೂಪಿಸಿಕೊಂಡಿದ್ದವರ ಆತಂಕ ಹೆಚ್ಚಾಗಿದೆ. ಏನಾದರೂ ಆಗಲಿ ಖರೀದಿ ಮಾಡಲೇಬೇಕೆಂಬ ಅನಿವಾರ್ಯತೆ ಇರುವವರು ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಮುಂದೆ ಬೆಲೆ ಮತ್ತಷ್ಟು ಹೆಚ್ಚಾಗುವ ಆತಂಕದಿಂದ ಈಗಲೇ ಖರೀದಿಸುವುದು ಉತ್ತಮ ಎಂಬ ಅಭಿಪ್ರಾಯಕ್ಕೂ ಬಂದಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರೆಟ್ ಚಿನ್ನದ 10 ಗ್ರಾಂನ ಬೆಲೆ 64150 ರು.ಇತ್ತು. ಶನಿವಾರಕ್ಕೆ 65350ಕ್ಕೆ ತಲುಪಿದೆ. ಅದೇ ರಈತಿ 24 ಕ್ಯಾರೆಟ್ನ 10 ಗ್ರಾಂ ಬೆಲೆ ಶುಕ್ರವಾರ 69980 ಇತ್ತು, ಅದು ಶನಿವಾರಕ್ಕೆ 71290 ರು ಗೆ ಏರಿಕೆಯಾಗುವ ಮೂಲಕ ದಾಖಲೆ ಬರೆದಿದೆ.