ಬೆಂಗಳೂರು: ಬಾಲಿವುಡ್ನ ಭಾರಿ ಬಜೆಟ್ನ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರವನ್ನು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮಾಡ್ತಾರಾ?
ಹೀಗೊಂದು ಸುದ್ದಿ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಹರಿದಾಡುತ್ತಿದೆ. ನಿತೇಶ್ ತಿವಾರಿ ಅವರ ಕನಸಿನ ಪ್ರೊಜೆಕ್ಟ್ ‘ರಾಮಾಯಣ’ ಈಗಾಗಲೇ ಸೆಟ್ಟೇರಿದೆ. ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮುಖ್ಯಭೂಮಿಕೆಯ ಈ ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಸೆಟ್ನಿಂದ ಹಲವು ಫೋಟೋ-ವಿಡಿಯೋಗಳು ವೈರಲ್ ಆಗಿದ್ದು, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಮುಂಬೈನ ಫಿಲ್ಮ್ ಸಿಟಿಯ ಸೆಟ್ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಸೀತಾ ದೇವಿ ಪಾತ್ರ ನಿರ್ವಹಿಸಲಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಸಾಯಿ ಪಲ್ಲವಿ ಈ ಚಿತ್ರಕ್ಕೆ ತಮ್ಮ ಹಿಂದಿನ ಚಿತ್ರಗಳ ಶುಲ್ಕಕ್ಕಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ 18 ರಿಂದ 20 ಕೋಟಿ ರೂ. ಪಡೆಯಲಿದ್ದಾರಂತೆ. ಸಾಮಾನ್ಯವಾಗಿ ನಟಿ ಚಿತ್ರವೊಂದಕ್ಕೆ 6 ಕೋಟಿ ರೂ. ಚಾಜರ್್ ಮಾಡುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಈ ನಡುವೆ ಕನ್ನಡದ ಕೆಜಿಎಫ್ ಸ್ಟಾರ್ ಯಶ್, ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಯಶ್ ಸಾಮಾನ್ಯವಾಗಿ ಚಿತ್ರವೊಂದಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ರಾಮಾಯಣದ ರಾವಣನ ಪಾತ್ರಕ್ಕೆ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವೇ ಆಗಿದ್ದರೆ, ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ನಟನಾಗಲಿದ್ದಾರೆ ರಾಕಿಂಗ್ ಸ್ಟಾರ