ಜೆಡಿಎಸ್ ನಾಯಕಿಯ ಪುತ್ರನ ಕಿರುಕುಳ: ಯುವತಿ ಆತ್ಮಹತ್ಯೆ
ಶಿರಸಿ: ಜೆಡಿಎಸ್ ನಾಯಕಿಯ ಪತ್ರ ನೀಡಿದ ಲೈಂಗಿಕ ಕಿರುಕುಳದಿಂದ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ನಾಯಕಿ ಚೈತ್ರಾ ಕೊರಾಠಕರ್ ಪುತ್ರ, ಚಿರಾಗ್ ಎಂಬಾತ ಯುವತಿ ರಿಶೇಶ್ ಡಿಸೋಜಾ ಎಂಬಾಕೆಗೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ, ಆಕೆ ಈತನ ಪ್ರೀತಿಯನ್ನು ನಿರಾಕರಿಸಿದ್ದ ಕಾರಣಕ್ಕೆ ಆಕೆಗೆ ಬೆದರಿಕೆ ಹಾಕಿದ್ದ ಎಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.
ಈ ಸಂಬAಧ ದೂರು ನೀಡಿದ್ದ ಕ್ರಿಸ್ತೋದ್ ಡಿಸೋಜಾ, ತಮ್ಮ ಮಗಳಿಗೆ ಪ್ರೀತಿಸುವಂತೆ ಪೀಡಿಸುತ್ತಿರುವ ಯುವಕನ ಮೇಲೆ ಕ್ರಮ ಕೈಗೊಳ್ಳುಯವಂತೆ ಪೊಲೀಸರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ಇದನ್ನೇ ಇಟ್ಟುಕೊಂಡು ನೀನು ಇದ್ದರೂ ಸತ್ತಂತೆ ಬೇಗ ಸಾಯಿ ಎಂದು ಯುವತಿಗೆ ಚಿರಾಗ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆತನ ಕಾಟ ಮತ್ತು ಬೆದರಿಕೆಗೆ ಹೆದರಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


