IndiraNagar Car accident: ಕುಡಿದು ವೇಗವಾಗಿ ಕಾರು ಚಾಲನೆ: ಹತ್ತು ಜನರ ಗ್ರೇಟ್ ಎಸ್ಕೇಪ್

Share It

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಿಂಚಿನAತೆ ಬಂದ ಕಾರು ಚಾಲಕ ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಇನ್ನೇನು ಗುದ್ದಬೇಕು ಎನ್ನುವಷ್ಟರಲ್ಲಿ ಗ್ರೇಟ್ ಎಸ್ಕೇಪ್ ಆಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಇಂದಿರಾನಗರದ ಬಾರ್ಬಿಕ್ಯೂ ಮುಂಭಾಗ ಘಟನೆ ನಡೆದಿದ್ದು, ವೇಗವಾಗಿ ನುಗ್ಗಿದ ಸ್ಕೋಡ ಕಾರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಹತ್ತು ಜನರಿಗೆ ಇನ್ನೇನು ಗುದ್ದಬೇಕು ಎನ್ನುವಷ್ಟರಲ್ಲಿ ಎಸ್ಕೇಪ್ ಆಗಿದ್ದಾರೆ. ಇದಕ್ಕಿಂತ ಮುಂಚೆ ಕಾರು ಚಾಲಕ ಬೈಕ್‌ವೊಂದಕ್ಕೆ ಗುದ್ದಿದ್ದು, ಸ್ಕೂಟರ್ ಸವಾರ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ.

ಡಿವೈಡರ್ ಗುದ್ದಿಕೊಂಡು ಬಂದ ಸ್ಕೋಡಾ ಕಾರು ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಬೈಕ್‌ಗೆ ಗುದ್ದಿದೆ. ಅನಂತರ ರಸ್ತೆ ಬದಿ ನಿಂತಿದ್ದವರ ಮೇಲೆ ನುಗ್ಗಿದ್ದು, ಅವರೆಲ್ಲರೂ ತಕ್ಷಣವೇ ಓಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ನೋಡನೋಡುತ್ತಿದ್ದಂತೆ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.


Share It

You May Have Missed

You cannot copy content of this page