ಉಪಯುಕ್ತ ಸುದ್ದಿ

ದುಬೈನಲ್ಲಿ 75 ವರ್ಷಗಳಲ್ಲೇ ಅತ್ಯಧಿಕ ಮಳೆ: 28 ಭಾರತೀಯ ವಿಮಾನಗಳು ರದ್ದು

Share It

ದುಬೈ: ದುಬೈನಲ್ಲಿ ದಿಢೀರನೆ ಸುರಿದ ಭಾರೀ ಮಳೆಯಿಂದ ಜನರು ಹಾಗೂ ವಿದೇಶೀ ಪ್ರಯಾಣಿಗರು ತತ್ತರಿಸಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಮಂಗಳವಾರ ಏಕಾಏಕಿ ಮಳೆಯಾಗಿದ್ದು ಒಂದು ವರ್ಷದಲ್ಲಿ ಆಗಬೇಕಿದ್ದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಚಂಡಮಾರುತದ ಪರಿಣಾಮ ಈ ಮಳೆಯಾಗಿದೆ ಎಂದು ಹೇಳಲಾಗಿದೆ.

ಭಾರೀ ಮಳೆಯಿಂದಾಗಿ ಜನಜೀವನ ತತ್ತರಿಸಿದ್ದು, ಸುಮಾರು 500 ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 28 ಭಾರತೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ರನ್ ವೇಯಲ್ಲಿ ವಿಮಾನಗಳು ಸಂಚರಿಸುತ್ತಿರುವ ದೃಶ್ಯಗಳು ಹರಿದಾಡುತ್ತಿವೆ.

ಯುಇಎ, ಓಮನ್, ಬಹರೇನ್ ಸೇರಿದಂತೆ ಹಲವು ಅರಬ್ ದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. ಹವಾಮಾನ ಇಲಾಖೆ ಪ್ರಕಾರ 1949ರ ನಂತರ ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿದೆ. 1971ರಲ್ಲಿ ಯುಎಇ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿ ಇಷ್ಟು ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.


Share It

You cannot copy content of this page