ಬೆಂಗಳೂರು: ಇದೇ ಏಪ್ರಿಲ್ 12 ಮತ್ತು ಏಪ್ರಿಲ್ 13 ರಂದು ರಾಜ್ಯದ ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದರ ಜೊತೆಗೆ ಏಪ್ರಿಲ್ 9ಕ್ಕೆ ದಕ್ಷಿಣಭಾರತದ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಲ್ಲಿ ಯುಗಾದಿ ಹಬ್ಬದ ಬಳಿಕ ಅಂದ್ರೆ, ಏಪ್ರಿಲ್ 13 ಹಾಗೂ 14 ಕ್ಕೆ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.
ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಬೇಸಿಗೆ ಮಳೆ ಬಿದ್ದಿದೆ. ಹೀಗಾಗಿ ಅಲ್ಲಿ ಜನ ಒಂದಷ್ಟು ನಿರೀಕ್ಷೆಯಲ್ಲಿ ಇದ್ದು, ಭರ್ಜರಿ ಮಳೆ ಬೀಳಲಿ ದೇವರೇ ಅಂತಾ ಬೇಡಿದ್ದಾರೆ. ಮತ್ತೊಂದೆಡೆ ಮಲೆನಾಡು ಭಾಗದಲ್ಲೂ ಜೋರಾಗಿ ಮಳೆ ಸುರಿದಿದೆ.