ರಾಜಕೀಯ ಸುದ್ದಿ

ಈ ಬಾರಿಯ ಮುಂಗಾರಿನಲ್ಲಿ ಅಧಿಕ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Share It

ಮುಂದಿನ ಜೂನ್ ತಿಂಗಳಲ್ಲಿ ಭಾರತದಲ್ಲಿ ಮುಂಗಾರು ಸಾಮಾನ್ಯಕ್ಕಿಂತ ಅಧಿಕವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ ತಿಂಗಳಲ್ಲಿ ಆರಂಭವಾಗುವ ಮುಂಗಾರು ಈ ಬಾರಿ ಶೇ.106 ರಷ್ಟು ಆಗಲಿದ್ದು, 87 ಸೆಂಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

1951ರಿಂದ 2023ರ ಅವಧಿಯಲ್ಲಿ ಅಮೆರಿಕದಲ್ಲಿ ಲಾ ಲೀಗ ಮತ್ತು ಎಲ್ ನೀನೋ ಚಂಡಮಾರುತದ ಅಬ್ಬರದ ದಾಖಲೆಗಳನ್ನು ಗಮನಿಸಿದರೆ ಭಾರತದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಲಿದೆ. ಎರಡು ಚಂಡಮಾರುತಗಳು ಕಾಣಿಸಿಕೊಂಡಾಗಲೆಲ್ಲಾ ಭಾರತದಲ್ಲಿ ಹೆಚ್ಚು ಮಳೆಯಾಗಿದೆ ಎಂದು ವರದಿ ವಿವರಿಸಿದೆ.

ಭಾರತದಲ್ಲಿ ಮುಂಗಾರು ಅವಧಿಯಾದ ಜೂನ್ ನಿಂದ ಸೆಪ್ಟೆಂಬರ್ ವರೆಗಿನ 4 ತಿಂಗಳ ಅವಧಿಯಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ.

ಕಳೆದ ವರ್ಷ ಚಂಡಮಾರುತ ಗುಜರಾತ್ ಕಡೆ ತಿರುಗಿದ್ದರಿಂದ ಸಾಮಾನ್ಯಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿತ್ತು. 2023ರಲ್ಲಿ ಚಂಡಮಾರುತದ ಪರಿಣಾಮ ಇಲ್ಲದ ಕಾರಣ ಸಾಮಾನ್ಯ ಮಳೆಯ ಪ್ರಮಾಣವಾದ 868 ಮಿ.ಮೀ.ಗಿಂತ ಕಡಿಮೆ 820 ಮಿ.ಮೀ. ಮಳೆಯಾಗಿತ್ತು.


Share It

You cannot copy content of this page