ಬೆಂಗಳೂರು: ಎಚ್.ಸಿ. ಬಾಲಚಂದ್ರ ಅವರನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದಕ್ಕೆ ಸಂಬAಧಿಸಿದAತೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ಮುಂದುವರಿಸಲು ಹೈಕೋರ್ಟ್ ನಿರಾಕರಿಸಿದೆ.
ಎಂ.ಎಸ್. ಹೇಮಂತ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ತಡೆಯಾಜ್ಞೆ ಮುಂದುವರೆಸಲು ನಿರಾಕರಿಸಿದೆ. ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ. ರೋಣ, ಹಾಲಿ ಸದಸ್ಯ ಕಾರ್ಯದರ್ಶಿ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ವಿಜೇತರಿದ್ದು, ಪರಿಸರದ ವಿಷಯಗಳಲ್ಲಿ ಅವರಿಗೆ ೧೬ ವರ್ಷ ಅನುಭವ ಹೊಂದಿದ್ದಾರೆ.
ಅವರು ೨೦೨೪ರ ಜನವರಿ ೧೧ರಂದು ಕಾರ್ಯಭಾರ ವಹಿಸಿಕೊಂಡಿದ್ದು, ತೃಪ್ತಿಕರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಅವರನ್ನು ಬದಲಾಯಿಸಿದರಿರುವುದು ಒಳ್ಳೆಯದು ಎಂದು ಕೋರಿದರು. ಅಧ್ಯಕ್ಷರ ಮತ್ತು ಸದಸ್ಯ ಕಾರ್ಯದರ್ಶಿ ಹುದ್ದೆಯನ್ನು ಐಎಎಸ್ ಮತ್ತು ಐಎಫ್‌ಎಸ್ ಹಂತದ ಅಧಿಕಾರಿಗಳಿಗೆ ಎರಡು ಮೂರು ವರ್ಷಗಳಿಗೆ ಮಾತ್ರವೇ ನೀಡಲಾಗುತ್ತಿರುವುದು ತರವಲ್ಲ.
ಈ ಅಧಿಕಾರಿಗಳು ವರ್ಗಾವಣೆ ಹೊಂದುವ ಕಾರಣ ಇಂತಹ ಹುದ್ದೆಗಳಲ್ಲಿ ಕಾರ್ಯದ ಸ್ಥಿರತೆಯ ಅಭಾವ ಉದ್ಭವಿಸುತ್ತದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಈ ಹಿಂದೆ ನೀಡಿದ್ದ ಮಧ್ಯಂತರ ತಡೆ ಆದೇಶ ವಿಸ್ತರಿಸಲು ನಿರಾಕರಿಸಿ ವಿಚಾರಣೆ ಮುಂದೂಡಿದೆ.