ಬೆಂಗಳೂರು: ಡಾ. ಜಿ. ಪರಮೇಶ್ವರ್ ಅವರ ಮೇಲಿನ 500 ಬೆಟ್ಟಿಂಗ್ ಪ್ರಕರಣದ ತನಿಖೆಗೆ ಆದೇಶ ನೀಡಿದ್ದ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾ., ಸುನೀಲ್ ದತ್ ಅವರಿದ್ದ ಪೀಠ, ಪ್ರಕರಣದ ವಿಚಾರಣೆ ನಡೆಸಿ, ತಮಾಷೆಗೆ 500 ರು. ಬೆಟ್ಟಿಂಗ್ ಕಟ್ಟಿದ್ದರೂ ಕೇಸ್ ಹಾಕಬಹುದಾ? ಆದೇಶ ನೀಡುವ ಮುನ್ನ ಪೊಲೀಸರಿಂದ ಮಾಹಿತಿ ತರಿಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.
ಡಾ. ಜಿ ಪರಮೇಶ್ವರ್ ಅವರು ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಕಬ್ಬಡಿ ಪಂದ್ಯ ವೀಕ್ಷಣೆ ಮಾಡುವಾಗ ತಮಾಷೆಗೆ ಪಂದ್ಯಕ್ಕೆ 500 ರು. ಬೆಟ್ ಕಟ್ಟುತ್ತೇನೆ ಎಂದಿದ್ದರು. ಇದರ ವಿರುದ್ಧ ನಾಗಭೂಷಣ್ ಎಂಬುವವರು ಖಾಸಗಿ ದೂರು ದಾಖಲು ಮಾಡಿದ್ದರು.

