ಬೆಂಗಳೂರಿನಲ್ಲಿ 16 ಕಡೆ ಐಟಿ ದಾಳಿ: 22 ಕೆಜಿ ಚಿನ್ನ, 1 ಕೋಟಿ ನಗದು ವಶ

Oplus_131072

Oplus_131072

Share It

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಬೆಂಗಳೂರಿನ 16 ಕಡೆ ದಾಳಿ ನಡೆಸಿದ್ದು, 22 ಕೆಜಿ ಚಿನ್ನಾಭರಣ ಮತ್ತು 1 ಕೋಟಿ 33 ಲಕ್ಷ ರೂ. ನಗದು ಸೇರಿದಂತೆ ಅಪಾರ ಪ್ರಮಾಣದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉದ್ಯಮಿಗಳು ಹಾಗೂ ಜ್ಯೂವೆಲರಿ ಅಂಗಡಿಗಳನ್ನು ಕೇಂದ್ರೀಕರಿಸಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 22 ಕೆಜಿ, 900 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಶಂಕರಾಪುರದಲ್ಲಿ 3 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಸಾರಾದೇವಿ ರಸ್ತೆಯಲ್ಲಿನ ಜ್ಯೂವೆಲರಿ ಅಂಗಡಿಯಿಂದ 3 ಕೋಟಿ 39 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಮರ್ಕೆಂಟೈನ್ ಬ್ಯಾಂಕ್ ಗೆ ಸೇರಿದ 2 ಕೋಟಿ 13 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

ಚಾಮರಾಜಪೇಟೆಯ ಸರಸ್ವತ್ ಬ್ಯಾಂಕ್ ನಿಂದ 84 ಲಕ್ಷ ರೂ. ಮೌಲ್ಯದ ಚಿನ್ನ, ಜಯನಗರದಲ್ಲಿ 6 ಕೋಟಿ ರೂ. ಮೌಲ್ಯದ ವಜ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page