ನವದೆಹಲಿ: ಫೈರ್ ಬ್ರ್ಯಾಂಡ್ ಕನ್ಹಯ್ಯ ಕುಮಾರ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಿದೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಪಂಜಾಬ್ ಮತ್ತು ದೆಹಲಿ ಸೇರಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದೆಹಲಿಯ ಎಲ್ಲಾ ಮೂರು ಸ್ಥಾನಗಳ ಅಭ್ಯರ್ಥಿಗಳ ಹೆಸರುಗಳೂ ಈ ಪಟ್ಟಿಯಲ್ಲಿ ಸೇರಿವೆ. ಇದರಲ್ಲಿ ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್, ಚಾಂದಿನಿ ಚೌಕದಿಂದ ಜೆಪಿ ಅಗರ್ವಾಲ್ ಮತ್ತು ವಾಯವ್ಯ ದೆಹಲಿಯಿಂದ ಉದಿತ್ ರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕನ್ಹಯ್ಯ ಕುಮಾರ್ ಅವರು, ಬಿಜೆಪಿಯನ್ನು ಸಮರ್ಥವಾಗಿ ವಿರೋಧಿಸುತ್ತಾ, ಸೂಕ್ತ ದಾಖಲೆಗಳೊಂದಿಗೆ ದೇಶಾದ್ಯಂತ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳು, ಭ್ರಷ್ಟಾಚಾರ ಮೊದಲಾದ ನಡೆಗಳ ವಿರುದ್ಧ ಆರೋಪ ಮಾಡುತ್ತಾ, ಪಕ್ಷವನ್ನು ಗಟ್ಟಿಗೊಳಿಸುತ್ತಿರುವ ಯುವ ನಾಯಕ. ಹೀಗಾಗಿ, ಅವರನ್ನು ಈಶಾನ್ಯ ದೆಹಲಿಯಿಂದ ಕಣಕ್ಕಳಿಸುವ ಮೂಲಕ ಅವರನ್ನು ಸಂಸತ್ಗೆ ಕಳುಹಿಸುವ ಯೋಜನೆ ರೂಪಿಸಿದೆ.
ಐಎನ್ಡಿಐಎ ಮೈತ್ರಿ ಕೂಟದ ಭಾಗವಾಗಿರುವ ಆಪ್ ಈ ಹಿಂದೆ ನಾಲ್ಕು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಘೋಷಿಸಿತ್ತು. ಇದೇ ವೇಳೆ ಬಿಜೆಪಿ ಕೂಡ ಎಲ್ಲಾ ಏಳು ಸ್ಥಾನಗಳಿಗೆ ತನ್ನ ಅಭ್ಯಥರ್ಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಇದೀಗ ಕಾಂಗ್ರೆಸ್ ತನ್ನ ಪಟ್ಟಿಯನ್ನು ಪ್ರಕಟಿಸಿದೆ. ಈಶಾನ್ಯ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಕನ್ಹಯ್ಯಾ ಕುಮಾರ್ ಬಿಜೆಪಿಯ ಮನೋಜ್ ತಿವಾರಿ ಅವರನ್ನು ಎದುರಿಸಲಿದ್ದಾರೆ. ದೆಹಲಿಯ ಮೂವರು ಅಭ್ಯರ್ಥಿಗಳ ಹೊರತುಪಡಿಸಿ, ಈ ಪಟ್ಟಿಯಲ್ಲಿ ಪಂಜಾಬ್ನ ಆರು ಅಭ್ಯರ್ಥಿಗಳ ಮತ್ತು ಉತ್ತರ ಪ್ರದೇಶದ ಓರ್ವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
ಈ ನಡುವೆ ಪಂಜಾಬ್ನ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಯಾಗಿದೆ. ಅಮೃತಸರದಿಂದ ಗುರುಜೀತ್ ಸಿಂಗ್ ಔಜಿಲಾ, ಜಲಂದ್ಹರ್ನಿಂದ ಚರಣ್ಜೀತ್ ಸಿಂಗ್ ಚನ್ನಿ, ಫತ್ತೇಘರ್ನಿಂದ ಅಮರ್ ಸಿಂಗ್, ಬಟಿಂಡಾದಿಂದ ಜೀತ್ ಮೋಹಿಂದರ್ ಸಿಂಗ್ ಸಿಧು, ಸಂಗ್ರೂರ್ ಕ್ಷೇತ್ರದಿಂದ ಶುಕ್ಪಾಲ್ ಸಿಂಗ್ ಕೈರಾ, ಪಟಿಯಾಲದಿಂದ ಡಾ. ಧರ್ಮವೀರ್ ಗಾಂಧಿ, ಉತ್ತರಪ್ರದೇಶದ ಅಲಹಾಬಾದ್ನಿಂದ ಉಜ್ವಲ್ ರೇವತಿ ರಮಣ್ ಸಿಂಗ್ ಅವರನ್ನು ಚುನಾವಣೆ ಕಣಕ್ಕಿಳಿಸಿದೆ