ರಾಜಕೀಯ ಸಿನಿಮಾ ಸುದ್ದಿ

ಸ್ತಬ್ಧವಾಗುತ್ತಾ ಕನ್ನಡ ಚಿತ್ರರಂಗ !

Share It

ಬೆಂಗಳೂರು: ಕಳೆದ ಒಂದು ತಿಂಗಳಿಂದ ಚಿತ್ರಮಂದಿರಗಳೆಲ್ಲ ಖಾಯಿ ಹೊಡೆಯುತ್ತಿದ್ದು, ಕನ್ನಡ ಚಿತ್ರರಂಗದ ಉಳಿವಿಗಾಗಿ ಚಿತ್ರರಂಗದ ಬಹುತೇಕ ನಿರ್ಮಾಪಕರು ಮುಂದಾಗಿದ್ದಾರೆ.

ಈ ಸಂಬAಧ ಹಿರಿಯ ಮತ್ತು ಕಿರಿಯ ನಿರ್ಮಾಪಕರೆಲ್ಲ ಇಂದು ಫಿಲ್ಮ್ ಛೇಂಬರ್‌ನಲ್ಲಿ ಸಭೆ ಸೇರಿದ್ದು, ಅನೇಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಈಗಾಗಲೇ ಸುಮಾರು ಒಂದು ತಿಂಗಳಿಂದ ಕನ್ನಡದ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಇದೇ ರೀತಿ ಮುಂದುವರಿದರೆ, ಚಿತ್ರರಂಗವೇ ಸತಬ್ಧವಾಗುವ ಸ್ಥಿತಿ ನಿರ್ಮಾಣವಾಗುತ್ತದೆ.

ಈ ಹಿನ್ನೆಲೆಯಲ್ಲಿ ನಿರ್ಮಾಪಕರೆಲ್ಲ ಸಭೆ ಸೇರಿ, ಇಂದು ಚರ್ಚೆ ನಡೆಸಿದರು. ನಿರ್ಮಾಪಕರಾದ ಚಿನ್ನೇಗೌಡ, ಕೆಪಿ ಶ್ರೀಕಾಂತ್, ರಾಕ್‌ಲೈನ್ ವೆಂಕಟೇಶ್, ಹೊಂಬಾಳೆ ಸಿನಿಮಾದ ಪ್ರತಿನಿಧಿ ಚಿದಾನಂದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಚಿತ್ರರಂಗದ ಇಂದಿನ ದುಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ಇದಕ್ಕಿರುವ ಪರಿಹಾರ ಮಾರ್ಗಗಳೇನು ಎಂಬ ಬಗ್ಗೆ ಹಲವರು ಅಭಿಪ್ರಾಯ ನೀಡಿದರು. ಈ ಎಲ್ಲ ಅಭಿಪ್ರಾಯವನ್ನು ಕ್ರೂಢೀಕರಿಸಿ, ಸ್ಟಾರ್ ನಟರ ಮುಂದಿಡಲು ತೀರ್ಮಾನಿಸಿದರು.

ಕನ್ನಡದ ಬಹುತೇಕ ನಟರು, ವರ್ಷಕ್ಕೆ ಒಂದು ಅಥವಾ ಎರಡು ವರ್ಷಕ್ಕೊಮ್ಮೆ ಸಿನಿಮಾ ಮಾಡುತ್ತಾರೆ. ಸಣ್ಣ ಪುಟ್ಟ ಸಿನಿಮಾಗಳು ಬಂದು, ಪರಭಾಷೆಯ ಸಿನಿಮಾಗಳ ಮುಂದೆ ಪೈಪೋಟಿ ನೀಡಲು ಸಾಧ್ಯವಾಗದೆ, ಸೋತು ಸುಣ್ಣವಾಗುತ್ತಿವೆ.

ಪರಭಾಷೆ ಸಿನಿಮಾಗಳನ್ನಷ್ಟೇ ಓಡಿಸಲು ಸಾಧ್ಯವಿಲ್ಲದ ಕೆಲವು ಚಿತ್ರಮಂದಿರಗಳು ಅನಿವಾರ್ಯವಾಗಿ ಬಾಗಿಲು ಮುಚ್ಚಿಕೊಳ್ಳುತ್ತಿವೆ. ಹೀಗೆ ಆದಲ್ಲಿ, ಮುಂದೊಂದು ದಿನ ಇಡೀ ಚಿತ್ರರಂಗವೇ ಬಾಗಿಲು ಮುಚ್ಚಿಕೊಳ್ಳಬೇಕಾಗುತ್ತದೆ. ಹೀಗಾಗಿ, ಸ್ಟಾರ್ ನಟರು ವರ್ಷಕ್ಕೆರೆಡು ಸಿನಿಮಾ ಮಾಡುವಂತೆ ಮನವಿ ಮಾಡಲು ತೀರ್ಮಾನಿಸಿದರು.

ಕಳೆದ ಒಂದೂವರೆ, ಎರಡು ತಿಂಗಳಿಂದ ಐಪಿಎಲ್ ಮತ್ತು ಲೋಕಸಭೆ ಚುನಾವಣೆ ಕಾರಣಕ್ಕೆ ಕನ್ನಡದಲ್ಲಿ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿಲ್ಲ. ಒಂದು ತಿಂಗಳಿಂದ ಅಂತೂ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹೀಗಾಗಿ, ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂಬುದು ಸಿನಿಮಾ ರಂಗದ ಹಿರಿಯ ಅಭಿಪ್ರಾಯವಾಗಿತ್ತು.


Share It

You cannot copy content of this page