ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಹೊತ್ತು, ವಿದೇಶದಲ್ಲಿ ಕಾಲ ನೂಕುತ್ತಿರುವ ಪ್ರಜ್ವಲ್ ರೇವಣ್ಣಗೆ ಮೊದಲ ಬಾರಿಗೆ ದೊಡ್ಡಗೌಡ್ರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಪ್ರಜ್ವಲ್‌ಗೆ ಬರೆದ ಪತ್ರವನ್ನು ಟ್ವೀಟ್ ಮಾಡಿ, ವಿದೇಶದಿಂದ ಕೂಡಲೇ ವಾಪಸ್ ಆಗಿ, ವಿಚಾರಣೆ ಎದುರಿಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ನನ್ನ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ವಾರ್ನಿಂಗ್ ನೀಡುವ ಮೂಲಕ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಪ್ರಜ್ವಲ್ ಪ್ರಕರಣದಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ಮುಜುಗರವಾಗಿದೆ. ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗದೆ, ಇರುವುದು ವಿವಿಧ ತಿರುವುಗಳಿಗೆ ಕಾರಣವಾಗುತ್ತಿದೆ. ದೊಡ್ಡಗೌಡರ ಕುಟುಂಬದ ಬಗ್ಗೆ ದಿನಕ್ಕೊಂದು ಅಂತೆ-ಕAತೆಗಳು ಸೃಷ್ಟಿಯಾಗುತ್ತಿವೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ದೊಡ್ಡಗೌಡರು, ಪ್ರಜ್ವಲ್‌ಗೆ ಕಠಿಣ ಪದಗಳಲ್ಲಿ ವಾರ್ನ್ ಮಾಡಿದ್ದಾರೆ. ಪ್ರಜ್ವಲ್‌ಗೆ ಬರೆದಿರುವ ಪತ್ರವೊಂದರಲ್ಲಿ ಸುದೀರ್ಘವಾಗಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ವಿಚಾರಣೆ ಎದುರಿಸಿ, ಸತ್ಯಾಸತ್ಯತೆ ಹೊರಬರಲಿ, ಅದನ್ನು ಬಿಟ್ಟು ಕಳ್ಳಾಟ ಆಡುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ, ತನಿಖೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಮನವಿ ಮಾಡಿಕೊಂಡಿದ್ದರು. ಮುಂದಿನ ಕಾನೂನು ಕ್ರಮಗಳಿಗೆ ನಾವು ಜತೆಗಿರುತ್ತೇವೆ. ನೀನು ಬಂದು ಶರಣಾಗು ಎಂದು ಹೇಳಿದ್ದರು. ಇದೀಗ ದೊಡ್ಡಗೌಡರೇ ಅಖಾಡಕ್ಕೆ ಇಳಿದಿದ್ದು, ಮೊಮ್ಮಗನಿಗೆ ವಾರ್ನಿಂಗ್ ಮಾಡಿದ್ದಾರೆ.
ತಂದೆ ಜೈಲಿಗೆ ಹೋದರು, ದೇಶಕ್ಕೆ ವಾಪಸಾಗಿ ಶರಣಾಗಿ,. ವಿಚಾರಣೆ ಎದುರಿಸದ ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ಹಾಗೂ ತಮ್ಮ ತಾತನ ಮಾತಿಗೆ ಬೆಲೆ ಕೊಡ್ತಾರಾ ಕಾದು ನೋಡಬೇಕಿದೆ.