ಉಪಯುಕ್ತ ಸುದ್ದಿ

ಕೆ ಎಸ್ ಆರ್ ಟಿ ಸಿ ಗೆ 3 ರಾಷ್ಟ್ರ ಮಟ್ಟದ AdWorld Showdown ಪ್ರಶಸ್ತಿಗಳು

Share It


ನವದೆಹಲಿ: Best Customer Acquisition & Retention ವರ್ಗದಲ್ಲಿ ನಿಗಮದ ಬಸ್‌ಗಳ ಬ್ರ್ಯಾಂಡಿಂಗ್ ಗೆ Best Use of Technology ವರ್ಗದಲ್ಲಿ AWATAR 4.0 (UPI ಸೌಲಭ್ಯ ಸಮೇತ) ಹಾಗೂ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಉಪಕ್ರಮಗಳಿಗೆ ಪ್ರಶಸ್ತಿ ಲಭಿಸಿದೆ.

AWATAR ವ್ಯವಸ್ಥೆ ಮೂಲಕ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ, ನೈಜ-ಸಮಯ ಆಸನ ಮಾಹಿತಿ ಮತ್ತು ನಗದುರಹಿತ ಯುಪಿಐ ಪಾವತಿಗಳು ಸುಲಭವಾಗಿವೆ. ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಉಪಕ್ರಮಗಳಿಗೆ ಹಾಗೂ ನಿಗಮದ ಬಸ್ ಬ್ರ್ಯಾಂಡಿಂಗ್  ಅಂಬಾರಿ ಉತ್ಸವ, ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್ 2.0 , ಅಶ್ವ ಮೇಧ ಬಸ್ಸುಗಳು ಪ್ರಯಾಣಿಕರಲ್ಲಿ ಹೆಚ್ಚು ಜನಮನ್ನಣೆ ಗಳಿಸಿದೆ ಎಂಬುದಾಗಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಧಿ ಎಸ್ ಮಿತ್ತಲ್, ಮಾರ್ಕೆಟಿಂಗ್ ಲೀಡರ್
ಹುಲ್ಟ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ ರವರು ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಪರವಾಗಿ ಎಂ.ಪಿ. ಶ್ರೀಹರಿ ಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು ವಿಭಾಗ ಹಾಗೂ ಎಸ್. ಎಸ್. ದಶರಥ್, ವಿಭಾಗೀಯ ನಿಯಂತ್ರಣಾಧಿಕಾರಿ, ಹಾಸನ ವಿಭಾಗ, ಪ್ರಶಸ್ತಿಯನ್ನು ಸ್ವೀಕರಿಸಿದರು.


Share It

You cannot copy content of this page