ಹೊಸದೆಹಲಿ: 18ನೇ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳ (3 ಸೀಟು) ದಲ್ಲಿ ಅತ್ಯಧಿಕ ಶೇ.78, ಹಿಂಸಾಪೀಡಿತ ಮಣಿಪುರ (2 ಸೀಟು )ದಲ್ಲಿ ಶೇ.68 ರಷ್ಟು ಜನ ಹಕ್ಕು ಚಲಾಯಿಸಿದ್ದಾರೆ. ಬಿಹಾರ (4 ಸೀಟು) ದಲ್ಲಿಎಂದಿನಂತೆ ಅತೀ ಕಡಿಮೆ ಶೇ.47ರಷ್ಟು ಮತದಾನವಾಗಿದೆ. ನಕ್ಸಲ್‌ಬಾಧಿತ ಛತ್ತೀಸ್‌ಗಢದ ಬಸ್ತರ್‌ನಲ್ಲಿ ಶೇ.64 ಜನ ಮತ ಚಲಾವಣೆ ಮಾಡಿದ್ದಾರೆ.
18 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿದ್ದ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿಮತದಾನ ನಡೆಯಿತು. ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಶೇ.62 ರಷ್ಟು ಮತದಾನವಾದ ವರದಿಯಾಗಿದೆ.
8 ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಬ್ಬರು ಮಾಜಿ ರಾಜ್ಯಪಾಲರು ಸೇರಿ ಕಣದಲ್ಲಿದ್ದ 1,600 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತಪೆಟ್ಟಿಗೆ ಸೇರಿದೆ.
2019ರ ಚುನಾವಣೆಯಲ್ಲಿಮೊದಲ ಹಂತದಲ್ಲಿ ಮತದಾನವಾದ 102 ಕ್ಷೇತ್ರಗಳಲ್ಲಿಎನ್‌ಡಿಎ (ಬಿಜೆಪಿ 40) 51, ಯುಪಿಎ (ಕಾಂಗ್ರೆಸ್ 15) 51 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಡಿಎಂಕೆ 25 ಸ್ಥಾನ ಪಡೆದುಕೊಂಡಿತ್ತು.