ಮೆಜೆಸ್ಟಿಕ್-ಮಂತ್ರಿ ರಸ್ತೆ ಬಂದ್: ವೈಟ್ ಟಾಪಿಂಗ್ ಗಾಗಿ ರಸ್ತೆ ಬಂದ್
ಬೆಂಗಳೂರು: ಮೆಜೆಸ್ಟಿಕ್ ನಿಂದ ಮಂತ್ರಿ ಮಾಲ್ ಮೂಲಕ ಮಲ್ಲೇಶ್ವರ ಸಂಪರ್ಕಿಸುವ ರಸ್ತೆಯನ್ನು ವೈಟ್ ಟಾಪಿಂಗ್ ಮಾಡುವ ಸಲುವಾಗಿ ಬಂದ್ ಮಾಡಲಾಗಿದ್ದು, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಹೆಚ್ಚಾಗಿದೆ.

ಮಲ್ಲೇಶ್ವರ ಮತ್ತು ಮೆಜೆಸ್ಟಿಕ್ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ವೈಟ್ ಟಾಪಿಂಗ್ ಮಾಡುವ ಸಲುವಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಮಲ್ಲೇಶ್ವರ ತಲುಪಲು ಓಕಳೀಪುರ ಮಾರ್ಗವಾಗಿ ಸುತ್ತಿಬಳಸಿ ಬರಬೇಕಾದ ಅನಿವಾರ್ಯತೆ ವಾಹನ ಸವಾರರಿಗಿದೆ.

ಅಂತೆಯೇ ಶೇಷಾದ್ರಿಪುರಂನಿAದ ಓಕಳೀಪುರ ಜಂಕ್ಷನ್ ಕಡೆಗೆ ಬರುವ ವಾಹನಗಳಿಗೆ ಸಮಸ್ಯೆಯಾಗಿದೆ. ಮಂತ್ರಿ ಮಾಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಜನರು ಹೈರಾಣಾಗಿದ್ದಾರೆ. ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಪರದಾಟ ನಡೆಸಿದ್ದಾರೆ.


