ಬೆಂಗಳೂರು-ಜೈಪುರ್ ವಿಮಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ: ಇಂದೋರ್ ನಲ್ಲಿಯೇ ಲ್ಯಾಂಡಿಂಗ್: ಆದರೂ ಒಂದು ವರ್ಷದ ಮಗು ಸಾವು

Share It

ಇಂದೋರ್: ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಿ, ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಇಂದೋರ್ ನಲ್ಲಿ ಲ್ಯಾಂಡ್ ಮಾಡಲಾಯಿತಾದರೂ, ಒಂದು ವರ್ಷದ ಮಗುವಿನ ಪ್ರಾಣ ಕಾಪಾಡಲು ಸಾಧ್ಯವಾಗಲಿಲ್ಲ.

ಮೃತ‌ಮಗುವಿನ ಹೆಸರು ಮಹಮದ್ ಅಜ್ಲಾನ್ ಎನ್ನಲಾಗಿದೆ. ಮಗುವಿನ ಪೋಷಕರು ತಮ್ಮಿಬ್ಬರು ಮಕ್ಕಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಒಂದು ವರ್ಷದಗುವಿಗೆ ಉಸಿರಾಟದ ತೊಂದರೆ ಶುರುವಾಯಿತು. ಕೂಡಲೇ ಪೋಷಕರು ವಿಮಾನ ಸಿಬ್ಬಂದಿಗೆ ತಿಳಿಸಿ, ಸಿಬ್ಬಂದಿ ತಕ್ಷಣವೇ ಮಿಡ್ ಏರ್ ಕ್ರೈಸಿಸ್ ಘೋಷಣೆ ಮಾಡಿದರು. ವಿಮಾನದಲ್ಲಿದ್ದ ವೈದ್ಯರುಗುವಿಗೆ CPR ಕೂಡ ನಡೆಸಿದರು.

ಈ ನಡುವೆ ವಿಮಾನವನ್ನು ಇಂದೋರ್ ನಲ್ಲಿ ಇಳಿಸಲು ಸಕಲ ವ್ಯವಸ್ಥೆ ಮಾಡಲಾಗಿತ್ತು. ವಿಮಾನ ನಿಲ್ದಾಣದ ವೈದ್ಯರು ಮತ್ತು ಅಂಬ್ಯುಲೆನ್ಸ್ ಸಿದ್ಧತೆ ಮಾಡಿಕೊಂಡು, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮಗುವಿಗೆ ತುರ್ತು ಚಿಕಿತ್ಸೆ ಶುರುಮಾಡಲಾಯಿತು. ಅನಂತರ ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ದೃಢಪಡಿಸಿದರು ಎನ್ನಲಾಗಿದೆ.

ಮಗುವಿನ ಗಂಟಲಿನಲ್ಲಿ ಹಾಲು ಅಥವಾ ದ್ರವ ಪದಾರ್ಥ ಸಿಕ್ಕಿಹಾಕಿಕೊಂಡಿದ್ದು ಉಸಿರಾಟದ ತೊಂದರೆಗೆ ಕಾರಣವಾಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೂ, ಮಿಡ್ ಏರ್ ಕ್ರೈಸಿಸ್ ಘೋಷಣೆ ಮಾಡಿ, ಮೆಡಿಕಲ್ ಎಮರ್ಜೆನ್ಸಿ ಮೂಲಕ ಪ್ರಯತ್ನ ಮಾಡಿದರೂ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗದಿರುವುದು ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರಿಗೂ ನೋವುಂಟು ಮಾಡಿದೆ.


Share It

You May Have Missed

You cannot copy content of this page