ಹಗಲು-ರಾತ್ರಿ ಕೆಲಸ ಮಾಡಿ ಯೋಜನೆಗಳನ್ನು ಜಾರಿಗೊಳಿಸುತ್ತೇನೆ: ಪ್ರಧಾನಿ ಮೋದಿ

Oplus_131072

Oplus_131072

Share It

ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿ ಬೃಹತ್ ಬಿಜೆಪಿ-ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ ಅವರು “ಹಿಂದಿನ ಯುಪಿಎ ಸರ್ಕಾರ ಕೇವಲ ಹಗರಣಗಳ ಸರ್ಕಾರವಾಗಿತ್ತು ಅನ್ನೋದನ್ನು ಮಾಜಿ ಪ್ರಧಾನಿ ದೇವೇಗೌಡರು ಸವಿಸ್ತಾರವಾಗಿ ತಿಳಿಸಿದ್ದಾರೆ” ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಿದ ಕೆಲಸಗಳ ಸಾಧನೆಗಳ ವಿವರವನ್ನು ಜನರಿಗೆ ನೀಡುವುದು ನನ್ನ ಹೊಣೆಗಾರಿಕೆಯಾಗಿದೆ ಎಂದ ಪ್ರಧಾನಿ ಮೋದಿ ತಾನು ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡ್ ಹಿಡಿದುಕೊಂಡೇ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ ಎಂದು ಹೇಳಿದರು. ಭಾರತದ ಪ್ರತಿಯೊಬ್ಬ ನಾಗರಿಕನನ್ನು ತಮ್ಮ ಪರಿವಾರ ಅಂತ ಭಾವಿಸುತ್ತೇನೆ, ಹಗಲು ರಾತ್ರಿ ದಣಿವರಿಯದೆ ದೇಶದ ಜನರಿಗಾಗಿ ಕೆಲಸ ಮಾಡುತ್ತೇನೆ ಮತ್ತು ಅವರ ಕನಸುಗಳನ್ನು ನನಸಾಗಿಸುವುದೇ ತನ್ನ ಸಂಕಲ್ಪವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

24/7 ಕೆಲಸ ಮಾಡುವುದರ ಜೊತೆಗೆ 2047 ವರೆಗೆ ಯೋಚಿಸುವ ತಾನು ಕೇವಲ ಯೋಜನೆಗಳನ್ನು ರೂಪಿಸುವುದಿಲ್ಲ ಅವುಗಳನ್ನು ಜಾರಿಗೊಳಿಸುವ ಗ್ಯಾರಂಟಿ ಸಹ ನೀಡುತ್ತೇನೆ ಎಂದರು.
ಭಾರತ ದೇಶದ ಬಡವರು ತಮಗೆ ಉಚಿತವಾಗಿ ರೇಷನ್ ಸಿಗುತ್ತದೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ, ಆದರೆ ಒಬ್ಬ ಬಡವನ ಮಗನಾಗಿರುವ ತಾನು ಅವರ ಆಸೆಯನ್ನು ಸಾಕಾರಗೊಳಿಸಿರುವುದಾಗಿ ಹೇಳಿದ ಪ್ರಧಾನಿ ಮೋದಿ, ಇಲ್ಲಿ ನೆರೆದಿರುವ ಅನೇಕರು ಈ ಯೋಜನೆಯ ಲಾಭಾರ್ಥಿಗಳಾಗಿರಬಹುದು ಎಂದರು.


Share It

You cannot copy content of this page