ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಎಲ್ಲಾ ಸಟರ್ಿಫಿಕೆಟ್ ಗಳಿಗೆ ಮೋದಿ ಅವರ ಫೋಟೊ ಹಾಕಲಾಗಿತ್ತು. ಡೆತ್ ಸಟರ್ಿಫಿಕೆಟ್ಗೆ ಮಾತ್ರ ಏಕೆ ಮೋದಿ ಫೋಟೊ ಹಾಕಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಳಗಾವಿಯ ಸಂಸದರಾಗಿದ್ದ ಸುರೇಶ್ ಅಂಗಡಿ ಅವರಂತಹ ಸಜ್ಜನರ ಮೃತದೇಹವನ್ನು ಕ್ಷೇತ್ರದ ಜನರು ನೋಡುವುದಕ್ಕೂ ಬಿಡಲಿಲ್ಲ. ಜೆಸಿಬಿ ಮೂಲಕ ಅವರ ದೇಹವನ್ನು ತಳ್ಳಲಾಯಿತು. ಕಾಂಗ್ರೆಸ್ ಪಕ್ಷ ಏಕೈಕ ಸಂಸದ ಡಿ.ಕೆ.ಸುರೇಶ್ ಅವರು ಜನರ ಮೃತದೇಹಗಳನ್ನು ಸ್ವತಃ ನಿಂತು ಅತ್ಯಸಂಸ್ಕಾರ ಮಾಡಿದರು. ರೈತರ ತರಕಾರಿ ಖರೀದಿಸಿ ಜನರಿಗೆ ಹಂಚಿದರು. ಮೋದಿಯವರೇ ನಿಮ್ಮ ಸಂಪುಟದ ಸಹದ್ಯೋಗಿಗೆ, ಕ್ಷೇತ್ರದ ಜನರ ಭಾವನೆಗೆ ಬೆಲೆ ಕೊಡದ ನೀವು ದೇಶದ ಜನರ ಭಾವನೆ ಮತು ಬದುಕಿಗೆ ಬೆಲೆ ಕೊಡುತ್ತೀರಾ? ಎಂದರು.
ಹುಟ್ಟಿದ ನಂತರ ಎಲ್ಲರೂ ಸಾಯಲೇಬೇಕು. ಆದರೆ ಸಂಸದನಿಗೆ ಗೌರವಯತ ಸಂಸ್ಕಾರ ಸಿಗಲಿಲ್ಲ ಎನ್ನುವುದೇ ನೋವಿನ ಸಂಗತಿ. ಇದರ ಬಗ್ಗೆ ಬಿಜೆಪಿಯವರಾಗಲಿ, ಬೀಗರಾದ ಶೆಟ್ಟರ್ ಅವರಾಗಲಿ ಏಕೆ ಮಾತನಾಡಲಿಲ್ಲ. ಬರೀ ಮೋದಿ ಅವರ ಪ್ರಚಾರದಲ್ಲಿಯೇ ಎಲ್ಲರೂ ಜೈ ಎನ್ನುತ್ತಿದ್ದಾರೆ. ಮೋದಿ ಅವರೊಬ್ಬರೇ ಎಲ್ಲವೂ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.