ಅಪರಾಧ ರಾಜಕೀಯ

ಬೃಹತ್ ಲೈಂಗಿಕ ಹಗರಣದ ಆರೋಪಿ ಸಂಸದ ಮತ್ತು ಶಾಸಕರನ್ನು ಕೂಡಲೇ ಬಂಧಿಸಬೇಕು

Share It

ದೇವನಹಳ್ಳಿ: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮಗ ಹೊಳೆನರಸೀಪುರ ಶಾಸಕ ಎಚ್‌ಡಿ ರೇವಣ್ಣ ಮತ್ತು ಅವರ ಮೊಮ್ಮಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಅಸಹಾಯಕ ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯವು ಹೇಯ ಕೃತ್ಯವಾಗಿದ್ದು ಈ ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಿ ಎಂದು ಒತ್ತಾಯಿಸಿ ಪ್ರಜಾ ವಿಮೋಚನ ಚಳುವಳಿ (ಸ್ವಾಭಿಮಾನ) PVC ವತಿಯಿಂದ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಜಾ ವಿಮೋಚನಾ ಚಳುವಳಿ ಪಿವಿಸಿ (ಸ್ವಾಭಿಮಾನ)ಯ ರಾಜ್ಯ ಅಧ್ಯಕ್ಷ ಮುನಿಆಂಜನಪ್ಪ ಮಾತನಾಡಿ, ಮಾಜಿ ಪ್ರಧಾನಿಗಳಾದ ಎಚ್‌ಡಿ ದೇವೇಗೌಡ ಅವರು ತಮ್ಮ ಕುಟುಂಬದ ಸದಸ್ಯರಿಗೆ ಈ ದೇಶದ ಪ್ರಜಾಪ್ರಭುತ್ವ ಸಂವಿಧಾನದ ಆಶಯಗಳನ್ನು ಸರಿಯಾಗಿ ತಿಳಿಸಿಕೊಡದೆ ಜಾತಿಬಲ, ಅಧಿಕಾರದ ಬಲ, ಹಣಬಲದ ಪ್ರಭಾವದಿಂದ ದರ್ಪದಲ್ಲಿ ಬೆಳೆಸಿದ್ದರ ಪರಿಣಾಮ ತಮ್ಮ ಅಧಿಕಾರ ಹಣ ಬಲದ ಶಕ್ತಿಯಿಂದ ಅಸಹಾಯಕ ಮಹಿಳೆಯರನ್ನು ಹೆದರಿಸಿ ಬೆದರಿಸಿ ಲೈಂಗಿಕ ಶೋಷಣೆ ನಡೆಸಿರುವುದು ಅಕ್ಷಮ್ಯವಾದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತ ಕೃತ್ಯ.

ಈ ಅಮಾನವೀಯ ಕೃತ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರನ್ನು ಕೂಡಲೇ ಬಂದಿಸಬೇಕು ಇಲ್ಲದಿದ್ದರೆ ಸಂತ್ರಸ್ತರಿಗೆ ಬೆದರಿಕೆ ಹಾಕಿ ಸಾಕ್ಷಿ ನಾಶ ಮಾಡಿ ಪ್ರಕರಣವನ್ನು ಈ ಬಲಾಢ್ಯರು ದುರ್ಬಲಗೊಳಿಸುತ್ತಾರೆ ಈ ಹಗರಣದ ಸಂಬಂಧ ಎಚ್‌ಡಿ ರೇವಣ್ಣ ಇದನ್ನು ಐದು ವರ್ಷಗಳ ಹಿಂದಿನ ಘಟನೆಗಳು ಎಂದಿರುವುದರಿಂದ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಕೃತ್ಯವನ್ನು ಐದು ವರ್ಷಗಳಿಂದ ಮುಚ್ಚಿಟ್ಟಿರುವ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಬೇಕು.

ಈಗಾಗಲೇ ಶಾಸಕ ರೇವಣ್ಣ ಮತ್ತು ಆತನ ಮಗ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೆ ಕೆಲಸದ ಮಹಿಳೆಯರು ಮತ್ತಿತರರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಹೊಳೆನರಸೀಪುರ ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಅವರನ್ನು ಬಂದಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಅಲ್ಲದೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದರು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿ ತಲೆಮರೆಸಿಕೊಳ್ಳಲು ಸಹಕಾರ ನೀಡಿರುವುದು ಖಂಡನೀಯ ಎಸ್ ಐ ಟಿ ಅಧಿಕಾರಿಗಳು ವಿದೇಶಕ್ಕೆ ಪರಾರಿಯಾಗಿರುವ ಹಾಸನದ ಬಿಜೆಪಿ ಬೆಂಬಲಿತ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ನನ್ನು ಮತ್ತು ಇಲ್ಲಿರುವ ಶಾಸಕ ಎಚ್‌ಡಿ ರೇವಣ್ಣನನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಬಂದಿಸಬೇಕು, ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಇದರ ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಸೋಲೂರು ನಾಗರಾಜ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ತಳಗವಾರ ಪುನೀತ್, ನೆಲಮಂಗಲ ತಾಲ್ಲೂಕು ಅಧ್ಯಕ್ಷ ಟಿಕೆ ವಾಸುಮೂರ್ತಿ, ಮತ್ತಿತರ ಪದಾಧಿಕಾರಿಗಳಾದ ದೊಡ್ಡರಾಜು, ವಸಂತಮ್ಮ, ಅರುಣಾ, ಮುನಿಲಕ್ಷ್ಮಮ್ಮ, ಬೆಳ್ಳಹಳ್ಳಿ ಕಾಂತರಾಜ್, ಅಯೂಬ್ ಖಾನ್ ಹಾಗೂ ಕಾರ್ಯಕರ್ತರುಗಳು ಇದ್ದರು.


Share It

You cannot copy content of this page