ಗದಗ: ಮಲಗಿದ್ದಲ್ಲಿಯೇ ರಾತ್ರೋರಾತ್ರಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ದುಷ್ಕಮರ್ಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.
ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿ ನಾಲ್ವರನ್ನು ಗದಗ ನಗರದ ದಾಸರ ಓಣಿಯ ಮನೆಯಲ್ಲಿ ಕೊಲೆ ಮಾಡಲಾಗಿದೆ. ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾತರ್ಿಕ್ ಬಾಕಳೆ (27), ಪರಶುರಾಮ (55), ಆತನ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಗೀಡಾದವರು. ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಕ್ಕಳನ್ನು ಕೊಲೆ ಮಾಡಲಾಗಿದೆ. ಕೊಲೆ ಬಳಿಕ ದುಷ್ಕಮರ್ಿಗಳು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಇಂಚಿಂಚು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಸಚಿವ ಹೆಚ್ ಕೆ ಪಾಟೀಲ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಕಾಶ್ ಬಾಕಳೆ ಕುಟುಂಬಕ್ಕೆ ಧೈರ್ಯ ಹೇಳಿದ ಸಚಿವರು, ಇದೊಂದು ದುದರ್ೈವದ ಸಂಗತಿ, ಅಮಾನುಷ ಘಟನೆ. ಕೊಲೆಗಡುಕರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ದುಷ್ಕಮರ್ಿಗಳು ಯಾರು, ಅವರು ಹೇಗೆ ಬಂದರು ಎಂಬ ಮಾಹಿತಿ ಗೊತ್ತಿಲ್ಲ. ಬೆಳಗಿನ ಜಾವ 3 ಗಂಟೆ ಬಾಗಿಲು ಬಡಿದ ಸದ್ದು ಕೇಳಿಸಿತು. ನಾನು ಎದ್ದು ಯಾರು ಅಂತ ಕೂಗಿದೆ. ಯಾರು ಪ್ರತಿಕ್ರಿಯಿಸಲಿಲ್ಲ. ಕಳ್ಳರು ಇರಬಹುದು ಎಂದು 100ಕ್ಕೆ ಫೋನ್ ಮಾಡಿದೆ. ತಕ್ಷಣ ಅಕ್ಕ – ಪಕ್ಕದ ಜನರಿಗೂ ಫೋನ್ ಮಾಡಿದೆ. ಅವರು ಬಂದು ನೋಡಿದರು. ಈ ವೇಳೆ ಯಾರು ಇರಲಿಲ್ಲ. ಬಳಿಕ ನನ್ನ ಪುತ್ರನಿಗೆ ಪೋನ್ ಮಾಡಿದೆ. ಅವನು ಕರೆ ಸ್ವೀಕರಿಸಲಿಲ್ಲ.
ಆ ಬಳಿಕ ಅನುಮಾನ ಬಂದಿದ್ದರಿಂದ ಅಳಿಯ ಪರಶುರಾಮ್ ಹಾಗೂ ಅವರ ಪತ್ನಿ ಲಕ್ಷ್ಮೀಗೆ ಫೋನ್ ಮಾಡಿದೆ. ಅವರು ಸಹ ಕರೆ ಸ್ವೀಕರಿಸಲಿಲ್ಲ. ಅನುಮಾನ ಹೆಚ್ಚಾಗಿದ್ದರಿಂದ ತಕ್ಷಣ ಸ್ಥಳೀಯ ಪೊಲೀಸರಿಗೆ ಫೋನ್ ಮಾಡಿದೆ. ಪೊಲೀಸರು ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಯಿತು. ನನ್ನ ಪುತ್ರ ಕಾತರ್ಿಕ್, ಅಳಿಯ ಪರಶುರಾಮ್, ಅವರ ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಲೆಗೀಡಾಗಿದ್ದಾರೆ ಎಂದು ಪ್ರಕಾಶ್ ಬಾಕಳೆ ವಿವರಿಸಿದ್ದಾರೆ.
ಕೊಲೆ ಮಾಡಿದ್ದು, ದರೋಡೆಕೋರರಲ್ಲ: ಇದೊಂದು ಗಂಭೀರ ಘಟನೆಯಂತಿದೆ. ಕೊಲೆ ಮಾಡಿದವರು ದರೋಡೆಕೋರರಲ್ಲ ಎಂಬ ಅನುಮಾನ ಪೊಲೀಸರದ್ದು. ಹಾಗೇನಾದರೂ ಇದ್ದಿದ್ದರೆ ಮನೆಯಲ್ಲಿರುವ ಚಿನ್ನಾಭರಣ ಲೂಟಿ ಮಾಡುತ್ತಿದ್ದರು. ಮೃತ ದೇಹಗಳ ಮೇಲಿನ ಆಭರಣಗಳು ಕೂಡ ಹಾಗೇ ಇವೆ.
ಕೆಳ ಮಹಡಿಯಲ್ಲಿ ತಾಯಿ ಲಕ್ಷ್ಮೀ ಹಾಗೂ ಮಗಳು ಆಕಾಂಕ್ಷಾ ಕೊಲೆಯಾದರೆ, ಮೊದಲನೇ ಮಹಡಿಯಲ್ಲಿ ಪರಶುರಾಮ ಹಾಗೂ ಕಾತರ್ಿಕನ ಕೊಲೆಯಾಗಿದೆ. ಎಸ್ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ಐದು ತಂಡ ರಚನೆ ಮಾಡಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆದಿದೆ ಶೀಘ್ರದಲ್ಲೇ ಹಂತಕರ ಬಂಧನ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.