ರಾಜಕೀಯ ಸುದ್ದಿ

ಸ್ಥಳೀಯ ನಾಯಕರ ಜೊತೆ ಮೋದಿ ಉಪಹಾರ

Share It


ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಏ.27) ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದು, ಖಾಸಗಿ ಹೊಟೇಲ್​ನಲ್ಲಿ ತಂಗಿದ್ದಾರೆ. ಇಂದು (ಏ.28) ಬೆಳಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಜೊತೆ ಮೋದಿ ಉಪಹಾರ ಸೇವಿಸಿದರು.

10.55ಕ್ಕೆ ಹೋಟೆಲ್​ನಿಂದ ಹೊರಟು, 11 ಗಂಟೆಗೆ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವನೆ ಕಾವು ರಂಗೇರಿದೆ. ಈಗಾಗಲೇ ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಮೇ 7ರಂದು ರಾಜ್ಯದ ಉತ್ತರ ಕರ್ನಾಟಕದ ಭಾಗದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ನಡೆಯಲಿದೆ. ಜಿದ್ದಿ ಜಿದ್ದು ಎಂಬಂತೆ ಪಟ್ಟು ಬಿದ್ದಿರುವ ಕೇಸರಿ ಪಡೆಗೆ ಕರ್ನಾಟಕವೇ ಮೇನ್​ ಟಾರ್ಗೆಟ್ ಆಗಿದೆ. ಮೊದಲ ಹಂತದ ಮತದಾನಕ್ಕೂ ಮುನ್ನ ಮೂರ್ನಾಲ್ಕು ಬಾರಿ ಆಗಮಿಸಿದ್ದ ಪ್ರಧಾನಿ ಮೋದಿ, ಇದೀಗ 2ನೇ ಹಂತದ ಮತಶಿಕಾರಿಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದು, ಉತ್ತರ ಕರ್ನಾಟಕದಾದ್ಯಂತ ಭರ್ಜರಿ ಮತಬೇಟೆಗಿಳಿದಿದ್ದಾರೆ.

ಇಂದು ಮತ್ತು ನಾಳೆ (ಏಪ್ರಿಲ್ 28, 29) ರಾಜ್ಯದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಒಟ್ಟು ಐದು ಕ್ಷೇತ್ರಗಳಲ್ಲಿನ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಒಂದು ಒಂದೇ ದಿನ 4 ಕ್ಷೇತ್ರಗಳಲ್ಲಿ ಮೋದಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಬೆಳಗಾವಿ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ವಿಜಯನಗರ ಹೊಸಪೇಟೆಯಲ್ಲಿ ಜಿಲ್ಲೆಯ ಅಭ್ಯರ್ಥಿಗಳ ಪರ ಅವರು ಮತಯಾಚಿಸಲಿದ್ದಾರೆ. ಮೊದಲಿಗೆ ಮೋದಿ ಬೆಳಗಾವಿಯಿಂದಲೇ ಪ್ರಚಾರ ಆರಂಭಿಸಿದ್ದಾರೆ.


Share It

You cannot copy content of this page