ರಾಜಕೀಯ ಸಿನಿಮಾ ಸುದ್ದಿ

ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಕಾಮಿಡಿಯನ್ ಸ್ಪರ್ಧೆ

Share It

ವಾರಾಣಸಿ: ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚುತ್ತದೆ, ಅವರು ವಿಶ್ವಗುರು ಎನ್ನಲಾಗುತ್ತದೆ. ಆದರೆ, ಅವರ ವಿರುದ್ಧ ಒಂದು ಕಾಲದ ಅವರ ಅಭಿಮಾನಿ ಕಾಮಿಡಿಯನ್ ಸ್ಪರ್ಧೆಗೆ ಮುಂದಾಗಿದ್ದಾರೆ.

ನರೇಂದ್ರ ಮೋದಿ ಸ್ಪರ್ಧೆ ಮಾಡುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಶ್ಯಾಮ್ ರಂಗೀಲಾ ಎಂಬ ಕಾಮಿಡಿಯನ್ ಸ್ಪರ್ಧೆಗಿಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದ ಶ್ಯಾಮ್ ರಂಗೀಲಾ, ಅವರ ಪರವಾಗಿ ಮತ ಕೇಳಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ದೊಡ್ಡ ಸಮರ್ಥಕರಾಗಿದ್ದರು ಎನ್ನಲಾಗಿದೆ.

ಮೋದಿ ಅವರ ಆಡಳಿತ ತೃಫ್ತಿ ಕೊಡಲಿಲ್ಲ, ಜತೆಗೆ ಅವರು ಬರೀ ಸುಳ್ಳುಗಳನ್ನು ಹಾಎಳುತ್ತಲೇ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ ಎಂದು ರಂಗೀಲಾ ತಿಳಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿರುವ ಅವರು ಮೋದಿ ಅವರ ವರ್ಚಸ್ಸಿನ ಮುಂದೆ ನಿಲ್ಲಬಲ್ಲರೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಶುರುವಾಗಿದೆ. ಅದೇ ರೀತಿ ಕೆಲವರು ವಾರಣಸಿಯಲ್ಲಿ ಇಬ್ಬಿಬ್ಬರು ಕಾಮಿಡಿಯನ್ ಗಳು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವನ್ನು ಮಾಡಿದ್ದಾರೆ.


Share It

You cannot copy content of this page