ರಾಜಕೀಯ ಸುದ್ದಿ

ನನ್ನ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಶೀತಲ ಸಮರವಿಲ್ಲ: ಸಿಎಂ

Share It

ಕಲಬುರಗಿ: ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು.
“ಮತದಾರರು ನಾವು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಅದನ್ನು ನಂಬುತ್ತಾರೆ ಅಂತ ಅಂಡರ್ ಎಸ್ಟಿಮೇಟ್ ಮಾಡಿದರೆ ಅದು ನಮ್ಮ ದಡ್ಡತನ, ಜನರು ನಾವು ಹೇಳಿದ್ದನ್ನು ಕೇಳುತ್ತಾರೆ, ಬಿಜೆಪಿ ನಾಯಕರು ಹೇಳಿದ್ದನ್ನೂ ಜನರು ಕೇಳುತ್ತಾರೆ, ಇಬ್ಬರ ಮಾತುಗಳನ್ನು ತುಲನೆ ಮಾಡಿ ವಿವೇಚನೆಯಿಂದ ಮತ ಚಲಾಯಿಸುತ್ತಾರೆ ಎಂದರು. ತಮ್ಮ ಸರ್ಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳಿಂದ ಮತದಾರರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಮೂಡಿದೆ ಎಂದು ಸಿಎಂ ಹೇಳಿದರು.

ಇದೇ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮ ಅವರು ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಾರಿಯಲ್ಲಿರುವ ಶೀಲತ ಸಮರದಿಂದ ಕರ್ನಾಟಕ ಸರ್ಕಾರ ಪತನಗೊಳ್ಳಲಿದೆ ಅಂತ ಹೇಳಿರುವುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ಎಲ್ಲೋ ಕೂತು ಮಾತಾಡುವ ಸರ್ವೆಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ಅವರೇನು ಪ್ರಧಾನ ಮಂತ್ರಿಯೇ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷರೇ? ಕರ್ನಾಟಕ ರಾಜಕಾರಣದ ಬಗ್ಗೆ ಮಾತಾಡಲು ಅವರು ಯಾರೂ ಅಲ್ಲ, ತನ್ನ ಮತ್ತು ಶಿವಕುಮಾರ್ ನಡುವೆ ಶೀತಲ ಸಮರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ನುಡಿಗಳಲ್ಲಿ ಹೇಳಿದರು.


Share It

You cannot copy content of this page