ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಆರೋಪಿಯಾಗಿ ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಬಿಗ್ ನ್ಯೂಸ್ ಸಿಕ್ಕಿದೆ.
ಅದೇನೆಂದರೆ ಪ್ರಜ್ವಲ್ ಜರ್ಮನಿಯ ಮ್ಯೂನಿಚ್ ನಗರದಿಂದ ರೈಲಿನಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಇಂಗ್ಲೆಂಡಿನ ಲಂಡನ್ ನಗರಕ್ಕೆ ಪಲಾಯನ ಮಾಡಿರುವುದು ಬಯಲಾಗಿದೆ.
ಈ ರೀತಿ ಲಂಡನ್ ನಗರಕ್ಕೆ ಹೋಗಲು ಭಾರತ ಮೂಲದ ಇಂಗ್ಲೆಂಡಿನ ಉದ್ಯಮಿಯೊಬ್ಬರು ನೆರವು ನೀಡಿರುವ ಸಂಗತಿ ಬಯಲಾಗಿದೆ. ಪ್ರಜ್ವಲ್ ಜರ್ಮನಿಯ ಮ್ಯೂನಿಚ್ ನಗರದಿಂದ ಲಂಡನ್ ನಗರಕ್ಕೆ ಪ್ರಯಾಣಿಸುವಾಗ ದುಬೈ ನಗರದ ಸ್ನೇಹಿತ ಮತ್ತು ಬೆಂಗಳೂರು ಮೂಲದ ಸ್ನೇಹಿತ ರೈಲಿನಲ್ಲಿ ಜೊತೆಯಾಗಿ ಪ್ರಯಾಣ ಬೆಳೆಸಿರುವುದು ಬಯಲಾಗಿದೆ.