ಟಿಕೆಟ್ ಕೇಳಿದ್ದಕ್ಕೆ ರೈಲ್ವೆ ಟಿಸಿಗೆ ಇರಿತ:ತಡೆಯಲು ಹೋದ ಅಟೆಂಡರ್ ಸಾವು

13
Share It

ಬೆಳಗಾವಿ: ರೈಲ್ವೇ ಭೋಗಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದನ್ನು ಪ್ರಶ್ನೆ ಮಾಡಿದ ಟಿಸಿಗೆ ಮುಸುಕುಧಾರಿ ಯುವಕನೊಬ್ಬ ಮನಬಂದAತೆ ಚಾಕುವಿನಿಂದ ಇರಿಯಲು ಮುಂದಾಗಿದ್ದು, ಅದನ್ನು ತಡೆಯಲು ಮಧ್ಯೆ ಬಂದ ಕೋಚ್ ಅಟೆಂಡರ್ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಬಳಿ, ಚಾಲುಕ್ಯ ಎಕ್ಸ್ಪ್ರೆಸ್ ರೈಲಿನ ಎಸ್-೮ ಬೋಗಿಯಲ್ಲಿ ಟಿಸಿ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದರು. ಆದರೆ, ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಟಿಸಿಗೆ ಮನಬಂದAತೆ ಚಾಕುವಿನಿಂದ ಇರಿಯಲು ಆರಂಭಿಸಿದ್ದಾನೆ. ಆಗ ಅವರ ಸಹಾಯಕ್ಕೆ ಕೋಚ್ ಸಹಾಯಕ ಸಿಬ್ಬಂದಿ ದೇವ ಋಷಿ ಬಂದಿದ್ದು, ಅವರಿಗೆ ಆರೋಪಿ ಮನಬಂದAತೆ ಇರಿದು, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಟಿಕೆಟ್ ಪರಿಶೀಲನೆ ಮಾಡುತ್ತಿದ್ದ ಟಿಸಿ ಹಾಗೂ ಅವರ ಸಹಾಯಕ್ಕೆ ಆಗಮಿಸಿದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಬೆಳಗಾವಿ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.

ಸಾವನ್ನಪ್ಪಿರುವ ದೇವಋಷಿ ಬಿಹಾರ ಮೂಲದವರಾಗಿದ್ದು, ಅವರ ಶವವನ್ನು ಸ್ಥಳಾಂತರ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆರೋಪಿ ಮುಸುಕು ಧರಿಸಿದ್ದ ಕಾಋಣಕ್ಕೆ ಅಲ್ಲಿನವರಿಗ್ಯಾರಿಗೂ ಆತನ ಚಹರೆ ಪತ್ತೆಯಾಗಿಲ್ಲ. ನಿಲ್ದಾಣದ ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಆಯಾಮದಲ್ಲಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Share It

You may have missed

You cannot copy content of this page