ಸೋರುವ ಬಸ್ ಗಳೆಲ್ಲ ನಿಮ್ಮ ಕಾಲಕ್ಕೆ ಹೋಯ್ತು : ಬಿಜೆಪಿರಿಗೆ ರಾಮಲಿಂಗ ರೆಡ್ಡಿ ತಿರುಗೇಟು

207
Share It

ಫೇಕ್ ಪ್ಯಾಕ್ಟರಿ ಮನಸ್ಥಿತಿ ಬಿಟ್ಟು ಹೊರಬನ್ನಿ ಬಿಜೆಪಿ ನಾಯಕರೇ !


ಬೆಂಗಳೂರು: ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಡ್ರೈವರ್ ಛತ್ರಿ ಹಿಡಿದು ಬಸ್ ಓಡಿಸ್ತಿದ್ದಾರೆ. ಎಲ್ಲಿಗೆ ಬಂದಿದೆ ನೋಡಿ ನಮ್ ಸಾರಿಗೆ ಸಂಸ್ಥೆಯ ದುಸ್ಥಿತಿ.

ಇದು, ಬಿಜೆಪಿ ನಾಯಕರು ಟ್ವಿಟ್ಟರ್ ನಲ್ಲೊಂದು ವಿಡಿಯೋ ಹಂಚಿಕೊಂಡು ಬರೆದುಕೊಳ್ಳುತ್ತಿರುವ ಒಕ್ಕಣೆ. ಸಾಮಾನ್ಯ ಜನರಿಗೂ ಗೊತ್ತಿರುವಂತೆ ಪ್ರಸ್ತುತ ಸ್ಥಿತಿಯಲ್ಲಿ ಕೆಎಸ್ ಆರ್ ಸಿಟಿಯಲ್ಲಿ ಇಂತಹ ದುಸ್ಥಿತಿ ಇಲ್ಲ. ಏಕೆಂದರೆ, ಇಡೀ ದೇಶವೇ ನಮ್ಮ ಸಾರಿಗೆ ಸಂಸ್ಥೆ ಬಗ್ಗೆ ಹೆಮ್ಮೆಪಟ್ಟು, ಈ ಮಾದರಿ ಅಳವಡಿಸಿಕೊಳ್ಳಲು ಅಧ್ಯಯನ ನಡೆಸುತ್ತಿವೆ.

ಹೀಗಿದ್ಯೂ ಬಿಜೆಪಿ ನಾಯಕರಿಗೆ ಅದ್ಯಾಕೆ, ಇದು ಫೇಕ್ ಇರಬಹುದು ಎನಿಸುವುದಿಲ್ಲವೋ ಗೊತ್ತಿಲ್ಲ. ಇತ್ತೀಚೆಗೆ ಹೊಸಕೋಟೆ ದೇವಸ್ಥಾನಕ್ಕೆ ಮುಸ್ಲಿಂ ವ್ಯಕ್ತಿ ನೇಮಕ ಎಂದು ಟ್ವೀಟ್ ಮಾಡಿ, ಸಚಿವ ರಾಮಲಿಂಗ ರೆಡ್ಡಿ ಅವರ ಕೈಲಿ ಇಕ್ಕಿಸಿಕೊಂಡಿದ್ದರು. ಸಚಿಚರು ದಾಖಲೆ ಸಮೇತ ಟ್ವೀಟ್ ಮಾಡಿ ಕುಟುಕುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಿ ಪರಾರಿಯಾಗಿದ್ದರು.

ಈಗ ಮತ್ತೊಮ್ಮೆ ಬಿಜೆಪಿ ನಾಯಕರಿಗೆ ರಾಮಲಿಂಗ ರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಮನೋರಂಜನೆಗಾಗಿ ಚಾಲಕರು ಮಾಡಿಕೊಂಡಿರುವ ವಿಡಿಯೋ, ಅಷ್ಟು ಗೊತ್ತಾಗದೆ, ಇದನ್ನು ತಾ ಮುಂದು, ನಾ ಮುಂದು ಎಂದು ಹಂಚಿಕೊಂಡು, ಸುಳ್ಳು ಸೃಷ್ಟಿಸಿದ ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಲ್ಲ ಎನ್ನುವುದೇ ಬೇಸರ ಎಂದಿದ್ದಾರೆ.

ಬಿಜೆಪಿ‌ ಅವಧಿಯಲ್ಲಿ‌ ಸಾರಿಗೆ ಸಂಸ್ಥೆಗಳನ್ನು 5900 ಕೋಟಿ ರು. ಸಾಲದ ಸುಳಿಯಲ್ಲಿ ಮುಳುಗಿಸಿ ಹೋಗಿದ್ದರು. ನಮ್ಮ‌ ಸರ್ಕಾರ ಬಂದೊಡನೆ 5800 ಹೊಸ‌ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ. ತಡೆ‌ ಹಿಡಿಯಲಾಗಿದ್ದ ನೇಮಕಾತಿಗೆ ಚಾಲನೆ‌ ನೀಡಲಾಗಿದೆ. 13,999 ಹುದ್ದೆ ಖಾಲಿಯಿದ್ದು, ತಾಂತ್ರಿಕ‌ ಸಿಬ್ಬಂದಿ ಹಾಗೂ ಚಾಲಕ ನಿರ್ವಾಹಕರಿಗೆ ನೇಮಕಾತಿ‌ ಪತ್ರ ವಿತರಿಸಲಾಗಿದೆ ಎಂದು ಕುಟುಕಿದ್ದಾರೆ.

ಇನ್ನು ವಿಡಿಯೋ ಸಂಬಂಧಿಸಿ, ಪರಿಶೀಲನೆ ಮಾಡಿದ್ದು, ಧಾರವಾಡ ಘಟಕದ ವಾಹನ ಸಿಬ್ಬಂದಿ ಮಳೆ ಬಂದಾಗ ಮನೋರಂಜನೆಗಾಗಿ ಮಾಡಿದ ವಿಡಿಯೋ ಇದಾಗಿದೆ‌. ಬಸ್ ಅನ್ನು ತಜ್ಞರಿಂದ ಪರಿಶೀಲಿಸಿ, ಯಾವುದೇ ದೋಷವಿಲ್ಲ ಎಂದು ದೃಢೀಕರಿಸಲಾಗಿದೆ. ಆದರೂ, ಸಿಬ್ಬಂದಿಯ ಅಚಾತುರ್ಯಕ್ಕಾಗಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


Share It

You cannot copy content of this page