ರಾಮೇಶ್ವರ ಕೆಫೆ ಸ್ಫೋಟ: ಬಾಂಬರ್ ಗೆ ಬಂದಿತ್ತು ವಿದೇಶಿ ಹಣ, ಪಾಕ್ ಪಲಾಯನಕ್ಕೆ ಸಿದ್ಧವಾಗಿತ್ತು ಯೋಜನೆ!
ಬೆಂಗಳೂರು, ಏಪ್ರಿಲ್ 23: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಆರೋಪಿಗಳಿಗೆ ಖೆಡ್ಡ ತೋಡಿರುವ ಎನ್.ಐ.ಎ ಬಾಂಬರ್ ಸೇರಿದಂತೆ ಇತರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆಚ್ಚಿ ಬೀಳುವ ಮಾಹಿತಿಗಳು ತಿಳಿದುಬಂದಿದೆ. ಆರೋಪಿಗಳಿಗೆ ವಿದೇಶದಿಂದ ಹಣ ಬರುತ್ತಿತ್ತು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದ್ದು, ಪಾಕಿಸ್ತಾನಕ್ಕೆ ಹಾರಲು ಹೊಂಚು ಹಾಕಿದ್ದ ಸಂಗತಿ ಕೂಡ ಬಯಲಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹತ್ತಾರು ಜನರ ಜೀವದ ಜೊತೆಗೆ ಚೆಲ್ಲಾಟ ಆಡಿದ್ದ ಆರೋಪಿ ಪರಾರಿಯಾಗಿದ್ದ. ತಲೆಮರೆಸಿಕೊಂಡಿದ್ದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿದ್ ಹಾಗೂ ಅಬ್ದುಲ್ ಮತೀನ್ ತಾಹ ಇಬ್ಬರನ್ನು ಕೊಲ್ಕತ್ತದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಲವು ಭಯಾನಕ ಸಂಗತಿಗಳು ಬೆಳಕಿಗೆ ಬಂದಿವೆ.
ಬಾಂಬರ್ ಮುಸ್ಸಾವಿರ್ ಹಾಗೂ ಅಬ್ದುಲ್ ಮತೀನ್ಗೆ ವಿದೇಶದಿಂದ ಹಣ ಬರುತ್ತಿತ್ತು. ಇವರಿಬ್ಬರಿಗೆ ಸಹಾಯ ಮಾಡಿದ್ದ ಆರೋಪಿ ಮುಜಾಮಿಲ್, ಅತನದ್ದು ಮತ್ತು ಅವನ ಗೆಳೆಯರ ಬ್ಯಾಂಕ್ ಅಕೌಂಟ್ ಹಾಗೂ ಎಟಿಎಂ ಕಾರ್ಡ್ ನೀಡಿದನಡೆಸಲಾಗುತ್ತಿದೆ.ದಲೂ ಇವರ ಖಾತೆಗೆ ಹಣ ಬರುತ್ತಿತ್ತು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಯಾವಾಗ ಎನ್ಐಎಗೆ ಬ್ಯಾಂಕ್ ಅಕೌಂಟ್ ಬಗ್ಗೆ ಮಾಹಿತಿ ಸಿಕ್ಕಿತೋ ಬಳಿಕ ಅಬ್ದುಲ್ ಮತೀನ್ ತಾಹ ಮತ್ತು ಮುಸ್ಸಾವೀರ್ ಅಕೌಂಟ್ ಬಳಕೆ ನಿಲ್ಲಿಸಿಬಿಟ್ಟಿದ್ದರು. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಬಳಿಕ ಇಬ್ಬರು ಆರೋಪಿಗಳು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅಲ್ಲಿಂದ ಬಾಂಗ್ಲಾದೇಶದ ಮೂಲಕ ಪಾಕಿಸ್ತಾನ ತಲುಪಲು ಯೋಜನೆ ಮಾಡಿಕೊಂಡಿದ್ದರು. ಅದಕ್ಕಾಗಿ ಕನಿಷ್ಠ ಒಂದು ಲಕ್ಷ ರೂ. ಹಣದ ಅವಶ್ಯಕತೆ ಇತ್ತು. ಆದರೆ ಅದು ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿರುವಾಗಲೇ ಲಾಕ್ ಆಗಿದ್ದಾರೆ. ಈ ಆರೋಪಿಗಳು ಟೆಲಿಗ್ರಾಂ, ಸಿಗ್ನಲ್ ಸೇರಿ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಮಾದರಿಯಲ್ಲಿ ಸಂವಹನ ಮಾಡುತ್ತಿದ್ದರು. ತಾವು ಏನೆಲ್ಲಾ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಅಬ್ದುಲ್ ಮತಿನ್ಗೆ ನಿರ್ದೇಶನ ಕೂಡ ಬರುತ್ತಿತ್ತು. ಹ್ಯಾಂಡರ್ಸ್, ಕಮಾಂಡರ್ ಅಥವಾ ಕರ್ನಲ್ ಎಂಬ ಹೆಸರಿನಲ್ಲಿ ಸಂದೇಶ ಬರ್ತಿತ್ತು. ಈ ಹ್ಯಾಂಡ್ಲರ್ ಮೂಲತಃ ಪಾಕಿಸ್ತಾನದ ವ್ಯಕ್ತಿ ಎನ್ನು ಶಂಕೆ ಇದೆ. ಮಧ್ಯಪ್ರಾಚ್ಯ ದೇಶದಲ್ಲಿ ಇದ್ದುಕೊಂಡು ತಾಹಗೆ ನಿರ್ದೇಶನ ನೀಡಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಇದೆಲ್ಲದರ ಜೊತೆಗೆ ಆರೋಪಿಗಳಿಬ್ಬರ ಎನ್ಐಎ ಕಸ್ಟಡಿ ಅಂತ್ಯವಾದ ಕಾರಣ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸಿ ಮತ್ತೆ ಒಂದು ವಾರ ಎನ್ಐಎ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ.