ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಶ್ರೀಲಂಕಾ ಕ್ರಿಕೆಟ್ ಪ್ರವಾಸದಲ್ಲಿ ಮಾರ್ಕೆಲ್ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆ. ಆದ್ದರಿಂದ ಭಾರತ ತಂಡಕ್ಕೆ ತಾತ್ಕಾಲಿಕ ಬೌಲಿಂಗ್ ಕೋಚ್ ಆಯ್ಕೆ ಮಾಡಲು ಮುಂದಾಗಿರುವ ಬಿಸಿಸಿಐ, ಸಾಯಿರಾಜ್ ಬಹುತುಲೆ ಅವರನ್ನು ಹಂಗಾಮಿ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
ಕಳೆದ ತಿಂಗಳಷ್ಟೇ 2024 ರ ಟಿ-20 ವಿಶ್ವಕಪ್ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ದ್ವಿಪಕ್ಷೀಯ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಟಿ-20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈಗಾಗಲೇ ಈ ಎರಡು ಸರಣಿಗಳಿಗಾಗಿ ಬಿಸಿಸಿಐ ಎರಡು ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಆಟಗಾರರು ಜುಲೈ 22ರಂದು ಶ್ರೀಲಂಕಾಕ್ಕೆ ತೆರಳುವ ಸಾಧ್ಯತೆಗಳಿವೆ.
ಈ ಪ್ರವಾಸದೊಂದಿಗೆ ಟೀಂ ಇಂಡಿಯಾ ಕೋಚಿಂಗ್ ವಿಭಾಗದಲ್ಲಿ ಹೊಸಬರ ಮುಖ ಕಾಣಿಸಿಕೊಳ್ಳಲಿದೆ. ಇಷ್ಟು ದಿನ ರಾಹುಲ್ ದ್ರಾವಿಡ್ ನಿಭಾಯಿಸಿದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯನ್ನು ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ನಿಭಾಯಿಸಲಿದ್ದಾರೆ. ಗಂಭೀರ್ ಹೊರತುಪಡಿಸಿ ಉಳಿದ ಸಿಬ್ಬಂದಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ಬಿಸಿಸಿಐ ನಿರತವಾಗಿದೆ.
ಈ ಪ್ರವಾಸದೊಂದಿಗೆ ಭಾರತ ತಂಡದ ಕೋಚಿಂಗ್ ವಿಭಾಗದಲ್ಲಿ ಹೊಸಬರ ಮುಖ ಕಾಣಿಸಿಕೊಳ್ಳಲಿದೆ. ಇಷ್ಟು ದಿನ ರಾಹುಲ್ ದ್ರಾವಿಡ್ ನಿಭಾಯಿಸಿದ ಮುಖ್ಯ ಕೋಚ್ ಹುದ್ದೆಯನ್ನು ಟೀಂ ಇಂಡಿಯಾದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನಿಭಾಯಿಸಲಿದ್ದಾರೆ. ಗಂಭೀರ್ ಹೊರತುಪಡಿಸಿ ಉಳಿದ ಸಿಬ್ಬಂದಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ಬಿಸಿಸಿಐ ನಿರತವಾಗಿದೆ.
ಲಂಕಾ ಪ್ರವಾಸಕ್ಕೂ ಮುನ್ನ ತಂಡಕ್ಕೆ ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಹಾಗೂ ಫೀಲ್ಡಿಂಗ್ ಕೋಚ್ ಆಯ್ಕೆ ಮಾಡಬೇಕಾಗಿದೆ. ಈಗಾಗಲೇ ಈ ಹುದ್ದೆಗಳಿಗೆ ಹಲವರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಯಾರ ಹೆಸರೂ ಇನ್ನು ಅಂತಿಮವಾಗಿಲ್ಲ. ಇದರೊಳಗೆ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಶ್ರೀಲಂಕಾ ಪ್ರವಾಸದಲ್ಲಿ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆ.
ಆದ್ದರಿಂದ ಟೀಂ ಇಂಡಿಯಾ ತಾತ್ಕಾಲಿಕ ಬೌಲಿಂಗ್ ಕೋಚ್ ಆಯ್ಕೆ ಮಾಡಲು ಮುಂದಾಗಿರುವ ಬಿಸಿಸಿಐ, ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಯಿರಾಜ್ ಬಹುತುಲೆ ಅವರನ್ನು ಶ್ರೀಲಂಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಸಾಯಿರಾಜ್ ಬಹುತುಲೆ ಅವರು ಶೀಘ್ರದಲ್ಲೇ ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ಪಡೆಯನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಏಕದಿನ ಮತ್ತು ಟಿ-20 ಸರಣಿಗಳನ್ನು ಆಡಲಿದೆ. ಒಂದೆಡೆ ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ತಂಡದ ನಾಯಕರಾಗಿ ಕಾಣಿಸಿಕೊಂಡರೆ, ಟಿ-20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಏಕದಿನ ಸರಣಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಟಿ-20 ಸರಣಿಯೊಂದಿಗೆ ಈ ಪ್ರವಾಸ ಆರಂಭವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಜುಲೈ 27 ರಂದು ನಡೆಯಲಿದೆ.