ಮಧ್ಯಪ್ರದೇಶದ BJP ಸರಕಾರದ ಗೋಮೂತ್ರದಿಂದ ಕ್ಯಾನ್ಸರ್ ಗುಣಮುಖಗೊಳಿಸುವ ಯೋಜನೆಯಲ್ಲಿ 3.5 ಕೋಟಿ ಗುಳುಂ 

Share It

ಜಬಲ್ ಪುರ: ಮಧ್ಯಪ್ರದೇಶ ಸರಕಾರದಿಂದ ಹಸುವಿನ ಗಂಜಲ ಮತ್ತು ಸಗಣಿಯಲ್ಲಿ ಕ್ಯಾನ್ಸರ್ ಗುಣಪಡಿಸುವ ಔಷಧಿ ಕಂಡುಹಿಡಿಯುವ ಯೋಜನೆಗೆ ಬಿಡುಗಡೆಯಾಗಿದ್ದ ಅನುದಾನ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದೆ.

ಟೈಮ್ಸ್ ಆಫ್‌ ಇಂಡಿಯಾ ಮಾಡಿರುವ ವರದಿಯ ಅನ್ವಯ, ನಾನಾಜಿ ದೇಶಮುಖ್ ಎಟರ್ನರಿ ಸೈನ್ಸ್ ಯೂನಿವರ್ಸಿಟಿ ಹಸುವಿನ ಗಂಜಲ, ಸಗಣಿ ಮತ್ತು ಹಸುವಿನ ಹಾಲಿನ ಉತ್ಪನ್ನಗಳು ಬಳಸಿ ಕ್ಯಾನ್ಸರ್ ಗುಣಪಡಿಸುವ ಔಷಧಿ ಕಂಡು ಹಿಡಯುವ ಸಲುವಾಗಿ ಸರಕಾರದಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ 3.5 ಕೋಟಿ ರು. ದುರ್ಬಳಕೆಯಾಗಿದೆ.

ಈ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಜಬಲ್ ಪುರ ಜಿಲ್ಲಾಧಿಕಾರಿಗಳು, ಉಪಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಬ್ಬರು ಸದಸ್ಯರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ಯೋಜನೆಯ ಹೆಸರಲ್ಲಿ ಬಿಡುಗಡೆಯಾದ ಹಣವನ್ನು ರಿಸರ್ಚ್ ಗೆ ಸಂಬಂಧಪಡದ ಕಾರಣಕ್ಕೆ ಬಳಕೆ ಮಾಡಿರುವುದು ಕಂಡುಬಂದಿದೆ. ಇದರಲ್ಲಿ 3 ಲಕ್ಷ ರು. ಗಳನ್ನು ವಿಮಾನ ಪ್ರಯಾಣಕ್ಕೆ ಖರ್ಚು ಮಾಡಿದ್ದು, ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ ಎನ್ನಲಾಗಿದೆ.

15 ಲಕ್ಷ ರು.ಗಳನ್ನು ವಾಹನ ರಿಪೇರಿ, ಪೆಟ್ರೋಲ್, ಡೀಸೆಲ್ ಬಳಕೆ ಮಾಡಿರುವುದಾಗಿ ತಿಳಿಸಲಾಗಿದೆ. ಪಂಚಗವ್ಯ ಹೆಸರಿನ ಈ ಯೋಜನೆಗೆ ಮಧ್ಯ ಪ್ರದೇಶ ಸರಕಾರ 3.5 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 1.75 ಕೋಟಿ ರು.ಗಳನ್ನು ಕಚ್ಚಾವಸ್ತುಗಳು ಮತ್ತು ಮಿಷನರಿಗಳಿಗಾಗಿ ಕರ್ಚು ಮಾಡಿರುವುದಾಗಿ ಹೇಳಲಾಗಿದೆ.

ಒಟ್ಟಾರೆ ಗೋಮೂತ್ರದ ಹೆಸರಿನಲ್ಲಿ ಜನರನ್ನು ಮಾತ್ರವಲ್ಲದೆ ಸರಕಾರವನ್ನು ಯಾಮಾರಿಸಿ, ಅನುದಾಮವನ್ನು ಗುಳುಂ ಮಾಡುವ ಪ್ರಯತ್ನ ನಡೆದಿದೆ. ಕ್ಯಾನ್ಸರ್ ಗುಣಪಡಿಸುವ ಫಾರ್ಮುಲಾ ಕಂಡುಹಿಡಿಯುವುದಾಗಿ ಹೇಳಿ, ಕೋಟ್ಯಂತರ ಹಣವನ್ನು ಬೇರೆ ಬೇರೆವಕಾರಣಗಳಿಗೆ ಖರ್ಚು ಮಾಡಲಾಗಿದೆ. ಆ ಮೂಲಕ ಸರಕಾರದ ಹಣ ದುರ್ಬಳಕೆ ಮಾಡಲಾಗಿದೆ. ಇದೀಗ ಇಬ್ಬರು ಸದಸ್ಯರ ಸಮಿತಿ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ.


Share It

You May Have Missed

You cannot copy content of this page