ಉಪಯುಕ್ತ ಸುದ್ದಿ

ಎಸ್‌ ಎಸ್‌ ಜನಕಲ್ಯಾಣ ಟ್ರಸ್ಟ್‌ ನಿಂದ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

Share It

ದಾವಣಗೆರೆ: ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ 2026-27ನೇ ಸಾಲಿಗೆ ರಾಜ್ಯದ ಎಲ್ಲಾ ಸಮುದಾಯಗಳ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಪಿಯುಸಿ, ಐ.ಟಿ.ಐ, ಡಿಪ್ಲೋಮಾ, ಪದವಿ ಮತ್ತು ಇತರೆ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ 2026-27ರ ಶೈಕ್ಷಣಿಕ ಅವಧಿಯಲ್ಲಿ ಪ್ರವೇಶ ಪಡೆದವರಿಗೆ ಆಯಾ ಕಾಲೇಜುಗಳ ವಾರ್ಷಿಕ ಶುಲ್ಕಕ್ಕೆ ಅನುಗುಣವಾಗಿ ವಿದ್ಯಾರ್ಥಿ ವೇತನ ನೀಡಲಾಗುವುದು. ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲೆ- ಕಾಲೇಜುಗಳ ಮುಖ್ಯಸ್ಥರ ಪ್ರಮಾಣ ಪತ್ರದ ಜೊತೆ ಅರ್ಜಿ ಸಲ್ಲಿಸಬಹುದು.

ವಿವರಗಳಿಗಾಗಿ ಟ್ರಸ್ಟ್‌ನ ಅಂತರ್ಜಾಲ ತಾಣ www. ssjanakalyantrust.org ವೀಕ್ಷಿಸಬಹುದು. ಅರ್ಜಿ ಸಲ್ಲಿಸಲು ಜುಲೈ 15 ಕಡೇ ದಿನವಾಗಿದೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.


Share It

You cannot copy content of this page