ಅಪರಾಧ ರಾಜಕೀಯ ಸುದ್ದಿ

ಅಂಜಲಿ ಅಂಬಿಗೇರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಚನಾನಂದ ಶ್ರೀಗಳು

Share It


ಹುಬ್ಬಳ್ಳಿ: ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಮನೆಗೆ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ ಹಾಗೂ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಮುನೇನಕೊಪ್ಪ ಅವರು, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದ್ದು ಈ ಕೂಡಲೇ ರಾಜ್ಯ ಸರ್ಕಾರ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ, ಶಶಿ ಬಿಜವಾಡ, ಶಿವು ಮೆಣಸಿನಕಾಯಿ, ಬಸವರಾಜ ಅಮ್ಮಿನಬಾವಿ, ನಿರಂಜನ ಹಿರೇಮಠ, ಅರವಿಂದ ಯೋಗನಗೌಡ್ರ, ಮೃತ್ಯುಂಜಯ ಹಿರೇಮಠ, ರಾಜು ಕಂಪ್ಲಿ, ಮಂಜು ಗಡಿಯಣ್ಣವರ,ರಾಜು ಹುಲ್ಲಂಬಿ, ಸುಭಾಸ ಕಿತ್ತಲಿ ಅಮರಗೋಳ, ಅಣ್ಣಪ್ಪ ಬದ್ನಿಕಾಯಿ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


Share It

You cannot copy content of this page