ಸ್ಮಾರ್ಟ್ ಫೋನ್ ರಿಪೇರಿಗೆ ಪೋಷಕರ ನಿರಾಕರಣೆ: ಯುವತಿ ಆತ್ಮಹತ್ಯೆ
ಬೆಂಗಳೂರು:
ಯುವ ಜನತೆ ಅದೆಷ್ಟರ ಮಟ್ಟಿಗೆ ಮೊಬೈಲ್ ಗೆ ಅಡಿಕ್ಟ್ ಆಗಿರ್ತಾರೆ ಎಂದರೆ, ಫೋನ್ ಬಿಟ್ಟು ಒಂದರಗಳಿಗೆ ಇರಲಾರದ ಪರಿಸ್ಥಿತಿ ಇರುತ್ತದೆ. ಆದರೆ, ಅದಕ್ಕಿಂತಲೂ ಅಪಾಯಕಾರಿ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಪೋಷಕರು ಸ್ಮಾರ್ಟ್ ಫೋನ್ ರಿಪೇರಿ ಮಾಡಿಸಿಕೊಡೋಕೆ ಹಿಂದೇಟು ಹಾಕಿದರು ಎಂಬ ಕಾರಣಕ್ಕೆ 19 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೆಲಂಗಾಣದ ಮಚೇರಿಯನ್ ಜಿಲ್ಲೆಯ ಜೈಪುರ ಮಂಡಲದ ವೆಲಾಲ ಗ್ರಾಮದ ಸೈಶುಮಾ ಎಂಬ ಯುವತಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಕೆಲ ದಿನಗಳ ಹಿಂದೆ ಆಕೆಯ ಸ್ಮಾರ್ಟ್ ಫೋನ್ ಹಾಳಾಗಿದ್ದು, ರಿಪೇರಿ ಮಾಡಿಸಲು ಪೋಷಕರನ್ನು ಒತ್ತಾಯಿಸಿದ್ದಳು. ಆದರೆ, ಪೋಷಕರು ಫೋನ್ ರಿಪೇರಿ ಮಾಡಿಸಿ ಕೊಡಲು ಹಿಂದೇಟು ಹಾಕಿದ್ದರು. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೋಷಕರು ತೋಟದ ಕೆಲಸಕ್ಕಡ ಹೋಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುಸೈಮಾ, ಫೋನ್ ರಿಪೇರಿ ಮಾಡಿಸಲಿಲ್ಲ ಎಂಬ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.