ರಾಜಕೀಯ ಸುದ್ದಿ

ಜೆಡಿಎಸ್ ಪರಿಷತ್ ಸದಸ್ಯ ಟಿ.ಎ.ಶರವಣಗೆ ಲಘು ಹೃದಯಾಘಾತ

Share It

ಬೆಂಗಳೂರು,ಏ.12- ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಲಘು ಹೃದಯಾಘಾತಕ್ಕೆ ಒಳಗಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಲಘು ಹೃದಯಾಘಾತದಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿರುವುದಾಗಿ ಶರವಣ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ತಮಗೆ ಸ್ಟಂಟ್ ಅಳವಡಿಸಲಾಗಿದೆ. ಇದೀಗ ಗುಣಮುಖವಾಗಿದ್ದು, ಅಭಿಮಾನಿಗಳು, ಆತ್ಮೀಯರು ಆತಂಕಪಡುವ ಅವಶ್ಯಕತೆಯಿಲ್ಲ. ಎಲ್ಲರ ಪ್ರೀತಿ, ಹಾರೈಕೆ, ಪ್ರಾರ್ಥನೆಯಿಂದ ಹಾಗೂ ಭಗವಂತನ ಕೃಪೆಯಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಟಿ.ಎ.ಶರವಣ ತಿಳಿಸಿದ್ದಾರೆ.


Share It

You cannot copy content of this page