ವಕೀಲರ ಕಪ್ಪು ಕೋಟ್ಗೂ ಬೇಸಿಗೆ ಬಿಸಿ

Hicourt
Share It


ಬೆಂಗಳೂರು: ಬೇಸಿಗೆಯ ರಣಬಿಸಿಲಿನ ಝಳ ಇಡೀ ರಾಜ್ಯವನ್ನು ಹೈರಾಣಾಗಿಸಿದೆ. ಈ ನಡುವೆ ಕಪ್ಪು ಕೋಟು ಧರಿಸಿಯೇ ಕಲಾಪದಲ್ಲಿ ಭಾಗವಹಿಸಬೇಕಿದ್ದ ವಕೀಲರಿಗೆ ಕಪ್ಪು ಕೋಟಿನಿಂದ ತಾತ್ಕಾಲಿಕ ವಿನಾಯಿತಿ ನೀಡಲು ಹೈಕೋಟರ್್ ತೀಮರ್ಾನಿಸಿದೆ.

ಏಪ್ರಿಲ್ 18 ರಿಂದ ಮೇ 31 ರವರೆಗೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವಕೀಲರು ಕಪ್ಪು ಕೋಟ್ ಧರಿಸದೇ ಕಲಾಪದಲ್ಲಿ ಭಾಗಿಯಾಗಲು ವಿನಾಯಿತಿ ನೀಡುವ ನಿಧರ್ಾರವನ್ನು ಪೂರ್ಣ ನ್ಯಾಯಾಲಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೈಕೋಟರ್್ ಸುತ್ತೋಲೆ ಹೊರಡಿಸಿದೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರ ಮನವಿ ಆಧರಿಸಿ ಏಪ್ರಿಲ್ 16 ರಂದು ನಡೆದಿರುವ ಪೂರ್ಣ ನ್ಯಾಯಾಲಯದಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ.

ದೈನಂದಿನ ಸೂಚಿತ ಡ್ರೆಸ್ ಬದಲಾಗಿ ವಕೀಲರು ಶ್ವೇತವರ್ಣದ ಶಟರ್್ ಅಥವಾ ಯಾವುದೇ ಬಣ್ಣದ ಗಂಭೀರತೆ ಬಿಂಬಿಸುವ ಶ್ವೇತವರ್ಣದ ಸಲ್ವಾರ್ ಕಮೀಜ್ ಇಲ್ಲವೇ ಸೀರೆ ಜೊತೆಗೆ ಸಾದಾ ಶ್ವೇತ ವರ್ಣದ ಕುತ್ತಿಗೆ ಬ್ಯಾಂಡ್ ಧರಿಸಿ ಕಲಾಪದಲ್ಲಿ ಭಾಗಿಯಾಗಬಹುದು ಎಂದು ಹೈಕೋಟರ್್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.


Share It

You cannot copy content of this page