ಬ್ರಾಹ್ಮಣರ ಶಾಪ ಸುಮ್ನೆ ಬಿಡ್ತದಾ ಸೂರ್ಯ….
ಬ್ರಾಹ್ಮಣರ ಶಾಪ ಒಳ್ಳೇದಲ್ಲ, ಬ್ರಾಹ್ಮಣರಿಗೆ ತೊಂದ್ರೆ ಕೊಟ್ರೆ ಒಳ್ಳೇದಾಗಲ್ಲ ಎಂಬೆಲ್ಲ ಮಾತುಗಳು ನಮ್ಮ ಸಮಾಜದಲ್ಲಿ ಬಹಳ ದಿನಗಳಿಂದಲೂ ಪ್ರಚಲಿತದಲ್ಲಿವೆ. ಆದ್ರೆ ಇದು ಎಷ್ಟು ಸತ್ಯವೋ ಏನೋ ಗೊತ್ತಿಲ್ಲ. ಬ್ರಾಹ್ಮಣರಿಗೆ ಬ್ರಾಹ್ಮಣರೇ ತೊಂದ್ರೆ ಕೊಟ್ರೆ ಈ ಮಾತು ಅನ್ವಯವಾಗುತ್ತಾ ಅನ್ನೋದು ಕೂಡ ಮಿಲಿಯನ್ ಡಾಲರ್ ಪ್ರಶ್ನೆ.
ಈಗ ಇದೆಲ್ಲ ಯಾಕೆ ಅಂದರೆ, ತೇಜಸ್ವಿ ಸೂರ್ಯವಿರುದ್ಧಬಡಪಾಯಿ ಬ್ರಾಹ್ಮಣರೆಲ್ಲ ತಿರುಗಿಬಿದ್ದಿದ್ದಾರೆ. ಬ್ರಾಹ್ಮಣ ಪ್ರಾಬಲ್ಯದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಎಂಬ ಟ್ರಂಪ್ ಕಾರ್ಡ್ ಬಳಸಿಯೇ ಗೆಲುವು ಸಾಧಿಸಿದ್ದ ತೇಜಸ್ವಿ ಸೂರ್ಯಗೆ ಇದೀಗ ಅದೇ ಬ್ರಾಹ್ಮಣರೇ ಬಿಸಿತುಪ್ಪವಾಗಿದ್ದಾರೆ. ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರುಪಾಯಿ ಹಣ ಕಳೆದುಕೊಂಡ ಬ್ರಾಹ್ಮಣರೆಲ್ಲ ಸೇರಿ ಸೂರ್ಯಂಗೆ ಶಾಪ ಹಾಕುತ್ತಿದ್ದಾರೆ.
ಅಷ್ಟಕ್ಕೂ ಹಣ ಕಳೆದುಕೊಂಡವರು ಸೂರ್ಯನಿಗೆ ಶಾಪ ಯಾಕೆ ಹಾಕಬೇಕು ಅನ್ನೋದು ಇಲ್ಲಿ ಸಹಜ ಪ್ರಶ್ನೆ. ಶೇ.೮೫ ಕ್ಕೂ ಹೆಚ್ಚು ಬ್ರಾಹ್ಮಣರೇ ಸದಸ್ಯತ್ವ ಹೊಂದಿದ್ದ ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಸಂಪೂರ್ಣ ಆಡಳಿತ ಮಂಡಳಿ ಬ್ರಾಹ್ಮಣರದ್ದೇ ಆಗಿತ್ತು. ಈ ಆಡಳಿತ ಮಂಡಳಿ ಸೇರಿಕೊಂಡು, ಬಡ ಬ್ರಾಹ್ಮಣರೆಲ್ಲ ಸೇರಿಕೊಂಡು ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಕೋಟಿ ರುಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಒಬ್ಬೊಬ್ಬ ಆಡಳಿತ ಮಂಡಳಿ ನಿರ್ದೇಶಕ ಕೋಟ್ಯಾಂತರ ರುಪಾಯಿ ತಿಂದು ತೇಗಿದ್ದಾನೆ.
ಈ ಬಗ್ಗೆ ತನಿಖೆ ನಡೆದು, ಆರೋಪ ಸಾಭೀತಾಗಿ, ಬ್ಯಾಂಕ್‌ನ ಮಾಜಿ ಅಧ್ಯಕ್ಷರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ಬ್ಯಾಂಕ್ ಅನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಸಾರ್ವಜನಿಕರ ಹಣವನ್ನು ಕೇಂದ್ರ ಸರಕಾರಕ್ಕೆ ಹೇಳಿ ಕೊಡಿಸುವುದಾಗಿ, ಆಡಳಿತ ಮಂಡಳಿಯ ಕೆಲವರ ಪರ ನಿಂತ ತೇಜಸ್ವಿ ಸೂರ್ಯ ಭರವಸೆ ನೀಡಿದ್ದರು. ಈ ಸಂಬAzಧ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಜತೆಗೆ ಮಾತುಕತೆ ನಡೆಸಿರುವುದಾಗಿ ಜನರನ್ನು ನಂಬಿಸಿದ್ದರು. ಆದರೆ, ಅವರ ಯಾವುದೇ ಭರವಸೆ ಈವರೆಗೆ ಈಡೇರಿಲ್ಲ.
ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಹಣ ಕಳೆದುಕೊಂಡ ಎಲ್ಲ ಬ್ರಾಹ್ಮಣರು ಸೇರಿ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಕ್ಯಾಂಪೇನ್ ಮಾಡುತ್ತಿದ್ದಾರೆ. ಒಬ್ಬೊಬ್ಬರು ಕಳೆದುಕೊಂಡಿರುವ ೨೦-೩೦ ಲಕ್ಷ ರುಪಾಯಿ ಹಣಕ್ಕೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ತಮ್ಮ ತಮ್ಮ ಸಂಬAಧಿಕರನ್ನು ಭೇಟಿ ಮಾಡಿ ತಮಗಾದ ಪರಿಸ್ಥಿತಿಯನ್ನು ವಿವರಿಸಿ, ನಮ್ಮವನು ಎಂದು ಮತ ಹಾಕಿದರೆ ಆಗುವ ಅನಾಹುತ ವಿವರಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರ ಬ್ರಾಹ್ಮಣರ ಪ್ರಾಬಲ್ಯದ ಕ್ಷೇತ್ರ. ಇಲ್ಲಿ ಅನಂತಕುಮಾರ್ ಅದೇ ಕಾರಣಕ್ಕೆ ಸತತವಾಗಿ ಗೆಲುವು ಸಾಧಿಸಿದ್ದರು. ಅವರ ನಿಧನದ ನಂತರ ಅವರ ಕುಟುಂಬಕ್ಕೆ ಟಿಕೆಟ್ ನೀಡದ ಬಿಜೆಪಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ಕೊಟ್ಟಿತ್ತು. ಇದೀಗ ಅದೇ ಸಮುದಾಯ ತೇಜಸ್ವಿ ಸೂರ್ಯ ವಿರುದ್ಧ ತಿರುಗಿಬಿದ್ದಿದೆ. ತಮಗಾದ ಅನ್ಯಾಯದ ವಿರುದ್ಧ ಮತ ಹಾಕುವ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಜತೆಗೆ, ಮುಜರಾಯಿ ಇಲಾಖೆ ಮೂಲಕ ಬ್ರಾಹ್ಮಣ ಅರ್ಚಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿರುವ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳನ್ನು ಗೆಲ್ಲಿಸಲು ಪಣ ತೊಟ್ಟಿದೆ.
ಬ್ರಾಹ್ಮಣರ ಈ ಕೋಪ ಅದೆಷ್ಟರಮಟ್ಟಿಗೆ ತೇಜಸ್ವಿ ಸೂರ್ಯನಿಗೆ ಮುಳುವಾಗುತ್ತೆ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಅನುಕೂಲಕರವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬ್ರಾಹ್ಮಣರ ಶಾಪ ಒಳ್ಳೇದಲ್ಲ ಅನ್ನೋ ಮಾತು ನಿಜವಾಗುತ್ತಾ? ಅಥವಾ ಈ ಶಾಪ, ಪಾಪ ಅನ್ನೋದೆಲ್ಲ ಢೋಂಗಿ ಮಾತುಗಳು ಅನ್ನೋದು ಸಾಭೀತಾಗುತ್ತಾ ಕಾದು ನೋಡೋಣ.