ಪಿಂಕ್ ಹುಡುಗರನ್ನ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟ ಆರೆಂಜ್ ಆರ್ಮಿ

Share It

ಚೆನ್ನೈ: ಚೆನ್ನೈನ ಎಂಎ ಚಿದಂಬರ0 ಸ್ಟೇಡಿಯಂನಲ್ಲಿ ನಡೆದ 2024 ರ ಐಪಿಎಲ್‌ನ ಕ್ವಾಲಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಗೆಲುವು ಕಂಡಿದೆ.

ಭಾನುವಾರ ನೆಡೆಯುವ ಐಪಿಎಲ್ 2024 ರ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ಎದುರು ಎಸ್‌ಆರ್‌ಹೆಚ್ ಸೆಣಸಾಡಲಿದೆ. ಹೈದರಾಬಾದ್ ನೀಡಿದ 176 ರನ್‌ಗಳ ಗುರು ಬೆನ್ನಟ್ಟಿದ್ದ ರಾಜಸ್ಥಾನ ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲೇ ಟಾಮ್ ಕೊಹ್ಲರ್-ಕ್ಯಾಡ್ಮೋರ್ 10 ರನ್‌ಗೆ ಔಟ್ ಆದರು. ಉತ್ತಮವಾಗಿ ಆಡುತ್ತಿದ ಯಶಸ್ವಿ ಜೈಸ್ವಾಲ್ ಸಹಾ 42 ರನ್‌ಗೆ ವಿಕೆಟ್ ಕಳೆದುಕೊಂಡು ತಮ್ಮ ಆಟ ನಿಲ್ಲಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ಸಂಜು ಸ್ಯಾಮ್ಸನ್‌ನಿಂದ ಸಹ ಉತ್ತಮ ಆಟ ಮೂಡಿ ಬರಲಿಲ್ಲ, ಕೇವಲ 10 ರನ್‌ಗಳಿಸಿದ ಸಂಜು ವಿಕೆಟ್ ಒಪ್ಪಿಸಿ ಹೊರ ನೆಡೆದರು. ಬಳಿಕ ರಿಯಾನ್ ಪರಾಗ್ ಕೇವಲ 6 ರನ್‌ಗೆ ಔಟ್ ಆದರು.

ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರೆ, ಶಿಮ್ರಾನ್ ಹೆಟ್ಮೆಯರ್ 4 ಮತ್ತು ರೋವ್ಮನ್ ಪೊವೆಲ್ 6 ರನ್‌ಗೆ ಔಟ್ ಆಗುವ ಮೂಲಕ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಈ ಹಂತದಲ್ಲಿ ಆರ್‌ಆರ್ ಗೆಲುವಿಗೆ ಧ್ರುವ್ ಜುರೆಲ್ ಬಿರುಸಿನ ಬ್ಯಾಟಿಂಗ್ ಮಾಡಿದರು.

36 ಎಸೆತಗಳಲ್ಲಿ 6 ಸಿಕ್ಸರ್ ಹಾಗು 7 ಬೌಂಡರಿ ಮೂಲಕ ಅಜೇಯ 56 ರನ್ ಬಾರಿಸಿದ ಧ್ರುವ್ ಜುರೆಲ್ ಆರ್‌ಆರ್‌ಗೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈದರಾಬಾದ್ ಎದುರು ರಾಜಸ್ಥಾನ ಸೋಲಿಗೆ ಶರಣಾಯಿತು. ಹೈದರಾಬಾದ್ ಪರ ಶಹಬಾಜ್ ಅಹ್ಮದ್ 3 ವಿಕೆಟ್ ಪಡೆದು ಸಂಭ್ರಮಿಸಿದರು. ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದರೆ, ಟಿ ನಟರಾಜನ್ ಮತ್ತು ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದು ಮಿಂಚಿದರು.


Share It

You May Have Missed

You cannot copy content of this page