ಭಯ ಸೃಷ್ಟಿಯೇ ಸಲ್ಮಾನ್ ಮನೆ ದಾಳಿಯ ಉದ್ದೇಶ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಏಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಭಯದ ವಾತಾವರಣ ಸೃಷ್ಟಿಯೇ ಅವರ ಉದ್ದೇಶವಾಗಿತ್ತು ಎನ್ನಲಾಗಿದೆ.
ಘಟನೆ ನಡೆದು 24 ಗಂಟೆಗಳಲ್ಲಿ ನಗರದ ಅಪರಾಧ ವಿಭಾಗದ ಪೊಲೀಸರು ಸೋಮವಾರ ತಡರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ನಂತರ ಆರೋಪಿಗಳ ಬೆನ್ನುಹತ್ತಿದ ಇನ್ಸ್ಪೆಕ್ಟರ್ ದಯಾ ನಾಯಕ್ ನೇತೃತ್ವದ ಅಪರಾಧ ವಿಭಾಗದ 9 ನೇ ತಂಡ ಗುಜರಾತ್ನ ಭುಜ್ನಲ್ಲಿ ಇಬ್ಬರೂ ಬಿಹಾರ ಮೂಲದ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಆಜ್ಞೆಯ ಮೇರೆಗೆ ಗುಂಡಿನ ದಾಳಿ ನಡೆಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಿಹಾರ ಮೂಲದ ವಿಕಾಸ್ ಅಲಿಯಾಸ್ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಎಂದು ಗುರುತಿಸಲಾಗಿದೆ.
ಘಟನೆಯ ನಂತರ ಶೂಟರ್ಗಳು ತಮ್ಮ ಪಿಸ್ತೂಲ್ಗಳನ್ನು ಸೂರತ್ನ ನದಿಯಲ್ಲಿ ಎಸೆದಿದ್ದರು. ಹಣಕ್ಕಾಗಿ ನಮಗೆ ಬಂದ ಆದೇಶವನ್ನು ಪಾಲನೆ ಮಾಡಿದ್ದೇವೆ ಎಂದು ಇಬ್ಬರು ಆರೋಪಿಗಳು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ನಲ್ಲಿರುವ ಗ್ಯಾಲಕ್ಸಿ ಅಪಾಟರ್್ಮೆಂಟ್ನಲ್ಲಿ ಭಾನುವಾರ ನಸುಕಿನಲ್ಲಿ ಸಲ್ಮಾನ್ ಖಾನ್ನ ಬಾಲ್ಕನಿಯಲ್ಲಿ ಶೂಟರ್ಗಳು ಗುಂಡು ಹಾರಿಸಿದ್ದರು. ಸಲ್ಮಾನ್ ಖಾನ್ಗೆ ಭಯಪಡಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.