ಸಿನಿಮಾ ಸುದ್ದಿ

ಡಾಲಿಯ “ಉತ್ತರ ಕಾಂಡ”ದ ಶೂಟಿಂಗ್ ವಿಳಂಭವಾಗಿದ್ದೇಕೆ?

Share It

ಬೆಂಗಳೂರು: ಉತ್ತರ ಕಾಂಡ ಸಿನಿಮಾ ಸೆಟ್ಟೇರಿ ಸುಮಾರು ಎರಡು ವರ್ಷಗಳೇ ಕಳೆದಿವೆ. ಆದರೆ, ಶೂಟಿಂಗ್ ಇನ್ನೂ ಆರಂಭವಾಗಿಲ್ಲ ಎಂಬ ಕೊರಗಿದೆ. ಆದರೆ. ಚಿತ್ರತಂಡ ಈ ಬಗ್ಗೆ ಹೇಳುವ ಮಾತುಗಳೇ ಬೇರೆ.

ಉತ್ತರಕಾಂಡ’ ಚಿತ್ರದ ಮುಹೂರ್ತ 2022ರಲ್ಲೇ ಆಗಿತ್ತು. ಬಯಲು ಸೀಮೆಯ ಸಂಸ್ಕೃತಿಯನ್ನು ಎಳೆ-ಎಳೆಯಾಗಿ ಬಿಚ್ಚಿಡುವ ಕಥಾನಕವೇ ‘ಉತ್ತರಕಾಂಡ’. ಆ ಭಾಗದ ಆಡುಭಾಷೆಯನ್ನು ಸಿನಿಮಾ ಹೊಂದಿರುವುದರಿಂದ ಚಿತ್ರೀಕರಣಕ್ಕೆ ನಿಖರ ಸಂಶೋಧನೆ ಮತ್ತು ಪ್ಲಾನಿಂಗ್ ಅಗತ್ಯವಿತ್ತು. ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಶೂಟಿಂಗ್ ವಿಳಂಬವಾಗಿತ್ತು. ಇದೀಗ ಸರ್ವ ಸಿದ್ಧತೆಯೊಂದಿಗೆ ಚಿತ್ರೀಕರಣ ಮತ್ತೆ ಶುರುವಾಗಿದೆ ಎಂದು ಚಿತ್ರತಂಡ ಸಮಾಜಾಯಿಷಿ ನೀಡಿದೆ.

ಇದೀಗ ಶೂಟಿಂಗ್ ನಡೆಸಲು ಯೋಜನೆ ಸಿದ್ಧ ಮಾಡಿಕೊಂಡಿರುವ ಚಿತ್ರತಂಡ, 15 ದಿನಗಳ ಮೊದಲ ಹಂತದ ಚಿತ್ರೀಕರಣವನ್ನು ವಿಜಯಪುರದಲ್ಲಿ ನಡೆಸಲಿದೆ. ಸೋಮವಾರದಿಂದಲೇ ಶೂಟಿಂಗ್ ಆರಂಭಗೊಂಡಿದ್ದು, ಸಿನಿಮಾ ತಂಡ ಉತ್ಸುಕವಾಗಿದೆ. ಈ ಬಗ್ಗೆ ನಿದರ್ೇಶಕ ರೋಹಿತ್ ಪದಕಿ ಮಾತನಾಡಿ, ”ಪ್ಲಾನಿಂಗ್ ಹಾಗು ಸಂಶೋಧನೆಗಾಗಿ ನಾನು ಮತ್ತು ನಿಮರ್ಾಪಕರು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ. ಶಿವರಾಜ್ಕುಮಾರ್ ಮತ್ತು ಧನಂಜಯ್ ಮುಖ್ಯ ಪಾತ್ರದಲ್ಲಿರುವ ಬಹುದೊಡ್ಡ ತಾರಾಗಣದ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ ಕುರಿತು ಕುಂದುಕೊರತೆ ಬಾರದಂತೆ ನಾನು ಮತ್ತು ಕೆ.ಆರ್.ಜಿ ಕೆಲಸ ಮಾಡಲಿದ್ದೇವೆ” ಎಂದರು.

ಉತ್ತರಕಾಂಡದ ತಾರಾಬಳಗದಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ನಲ್ಲಿ ಕಾತರ್ಿಕ್ ಗೌಡ ಮತ್ತು ಯೋಗಿ ಜಿ.ರಾಜ್ ನಿಮರ್ಾಣ ಮಾಡಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿದರ್ೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅದ್ವೈತ ಗುರುಮೂತರ್ಿ ಅವರ ಮುಖ್ಯ ಛಾಯಾಗ್ರಹಣವಿರಲಿದೆ. ಪ್ರೊಡಕ್ಷನ್ ವಿನ್ಯಾಸ (ಡಿಸೈನ್) ಕೆಲಸ ವಿಶ್ವಾಸ್ ಕಶ್ಯಪ್ ಅವರದ್ದು. ಸದ್ಯದಲ್ಲೇ ಬಹುದೊಡ್ಡ ತಾರಾಬಳಗದ ಬಗ್ಗೆ ಮಾಹಿತಿ ಹೊರಬೀಳಲಿದೆ


Share It

You cannot copy content of this page